ಎಲೆಕ್ಟ್ರಿಕ್ ವಾಹನಕ್ಕೆ ಬೇಕಾಗುವ ವಸ್ತುಗಳ ಸಂಶೋಧನೆ ಮತ್ತು ತರಬೇತಿ ಅತಿ ಅಗತ್ಯ

ಕಲಬುರಗಿ:ಜೂ.8:ಭವಿಷ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳೇ ಜಗತ್ತನ್ನು ಆಳುವ ವಾಹನಗಳು ಅದಕ್ಕಾಗಿ ಅಂತಹ ವಾಹನಗಳನ್ನು ತಯಾರುಮಾಡಲು ಬೇಕಾಗುವಂತಹ ಲಿಥಿಯ್‍ಂ ಆಯಾನ್ ಬ್ಯಾಟ್ರಿಗಳಂತಹ ವಸ್ತುಗಳ ಸಂಶೋಧನೆ ಮತ್ತು ಅವುಗಳÀ ಕುರಿತ ಜ್ಞಾನ ಇಂದಿನ ಎಲ್ಲಾ ಇಂಜಿನಿಯರಿಂಗ್ ಅಧ್ಯಾಪಕರುಗಳಿಗೆ ಮತ್ತು ಮಟೆರಿಯಲ್ಸ್ ಕ್ಷೇತ್ರದಲ್ಲಿ ಸಂಶೋಧನೆ ಮಾಡುತಿರುವ ಅಧ್ಯಾಪಕರುಗಳಿಗೆ ಅತಿ ಅವಶ್ಯಕ. ಆದ್ದರಿಂದ ಇಂತಹ ಪ್ರಾಧ್ಯಾಪಕ ಜ್ಞಾನಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುವದು ಸೂಕ್ತವಾಗಿದೆ ಎಂದು ಸಿಂಗಾಪೂರ ದೇಶದ ನ್ಯಾಷನಲ್ ಯುನಿವರ್ಸಿಟಿಯ ಪ್ರೋ|| ಡಾ|| ಪಳನಿ ಬಾಲಯ್ಯನವರು ಅಭಿಪ್ರಾಯಪಟ್ಟರು.

ಅವರು ಕಲಬುರಗಿ ನಗರದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನ ಸಿರ್ಯಾಮಿಕ್ ಮತ್ತು ಸಿಮೆಂಟ ವಿಭಾಗವು ಎ.ಆಯಿ.ಸಿ.ಟಿ.ಇ (ಂIಅಖಿಇ) ಅಟಲ್ ಪ್ರಾಯೋಜಿತ ‘ದಿ ರೋಲ್ ಆಫ್ ಮಟೆರಿಯಲ್ಸ್ ಇನ್ ಎಲೆಕ್ಟ್ರಿಕಲ್ ವೆಹಿಕಲ್’ ವಿಷಯದ ಕುರಿತ ಜೂನ್ 7 ರಿಂದ 11 ದರವರೆಗಿನ ಒಂದು ವಾರದ ಆನ್‍ಲೈನ್ ವರ್ಚೂವಲ್ ಪ್ರಾಧ್ಯಾಪಕ ಜ್ಞಾನಾಭಿವೃದ್ಧಿ ತರಬೆತಿ ಕಾರ್ಯಕ್ರಮದ(ಫ್ಯಾಕಲ್‍ಟಿ ಡೆವೆಲಪ್‍ಮೆಂಟ್ ಪ್ರೋಗ್ರಾಮ್) ಉದ್ಗಾಟನಾ ಸಮಾರಂಭದಲ್ಲಿ ಮುಖ್ಯ ಅಥಿತೀಗಳಾಗಿ ಮಾತ್ತಾಡಿದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ|| ಭಿಮಾಶಂಕರ ಸಿ. ಬಿಲಗುಂದಿಯವರು ಕಾರ್ಯಕ್ರಮನ್ನು ಆಯೋಜಿಸಿದ ಸಿರಾಮಿಕ್ ವಿಭಾಗವನ್ನು ಅಭಿನಂದಿಸಿ ಚಾಲನೆ ನೀಡಿದರು. ಕಾರ್ಯಕ್ರಮದ ಸಂಘಟನಾ ಅಧ್ಯಕ್ಷರು ಕಾಲೇಜಿನ ಪ್ರಾಚಾರ್ಯರಾದ ಡಾ|| ಎಸ್.ಎಸ್ ಹೆಬ್ಬಾಳರವರು ಮಾತ್ತನಾಡಿ ಸದ್ಯದ ಜ್ವಲಂತ ಸಮಸ್ಯೆಯಾದ ಪೇಟ್ರೋಲ್ ಡಿಜ್ಯೆಲ್ ಚಾಲಿತ ವಾಹನಕ್ಕೆ ಪ್ರರ್ಯಾದವಾದ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವೆಹಿಕಲ್‍ಗಳ ಮಟೆರಿಯಲ್ ಕುರಿತ ಈ ಕಾರ್ಯಕ್ರಮ ಆಯೋಜಿಸಿದ ಸಿರಾಮಿಕ್ ವಿಭಾಗದ ಎಲ್ಲರನ್ನು ಅಭಿನಂದಿಸಿ ಎಲ್ಲಾ ಪ್ರಾಧ್ಯಾಕಗರುಗಳು ಇದರ ಸದುಉಪಯೋಗ ಪಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೋಳ್ಳಬೆಕೇಂದು ಹೇಳಿದರು, ಕಾರ್ಯಕ್ರಮದ ಕನ್‍ವಿನರ್ (ಸಂಚಾಲಕರು) ಮತ್ತು ಸಿರಾಮಿಕ್ ವಿಭಾಗದ ಮುಖ್ಯಸ್ಥರಾದ ಡಾ|| ಅಮರೇಶ ರಾಯಚೂರು ಅವರು ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಕುರಿತು ಮಾತ್ತನಾಡಿದರು.

ತರಬೇತಿ ಕಾರ್ಯಕ್ರಮದ ಸಂಯೋಜಕರಾದ ಪ್ರೋ|| ಪವನ ರಂಗದಾಳರವರು ಒಂದು ವಾರದ ತರಬೇತಿ ಕಾರ್ಯಕ್ರಮದ ಕುರಿತು ಪಕ್ಷೀ ನೋಟವನ್ನು ನಿಡಿದರÀು, ಡಾ|| ಎಸ್.ಬಿ ಪಾಟೀಲ್ ಸ್ವಾಗತಿಸಿದರು, ಡಾ|| ಬಾಬುರಾವ ಎನ್.ಶೇರಿಕರ ವಂದಿಸಿದರು, ಡಾ|| ವಿರೇಶ ಮಲ್ಲಾಪೂರ ಅಥಿತಿಯನ್ನು ಪರಿಚಯಿಸಿದರು, ಉಪಪ್ರಾಚಾರ್ಯ ಡಾ|| ಶೆಶಿಧರ ಕಲಶೆಟ್ಟಿ, ಅಕಾಡೆಮಿಕ್ ಡಿನ್ ಡಾ|| ಸಿದ್ರಾಮ ಪಾಟೀಲ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ದೇಶದ ವಿವಿದೆಡೆಯಿಂದ ನೋದಾಯಿಸಿದ 200 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಇ ತರಬೇತಿ ಕಾರ್ಯಕ್ರಮದಲ್ಲಿ ಸಿಂಗಾಪೂರ ನ್ಯಾಷ್ಯನಲ್ ವಿಶ್ವವಿದ್ಯಾಲಯದ ಡಾ|| ಪಳನಿ ಬಾಲಯ್ಯ, ಕೆನಡಾ ದೇಶದ ಇನ್‍ಸ್ಟಿಟ್ಯೂಟ್ ಆಫ್ ಹೈಡ್ರೋಕ್ಯೋಬ್ಯಾಕ್ ರಿಸರ್ಚನ ವಿಜ್ಞಾನ ಡಾ|| ಎಮ್.ವಿ. ರೆಡ್ಡಿ ಥೈಲ್ಯಾಂಡ ದೇಶದ ಕೋನ ಕಿನ್ ವಿಶ್ವವಿದ್ಯಾಲಯದ ಪ್ರೋ|| ಡಾ|| ದಿನೇಶ ಬಾಲಸುಬ್ರಮಣ್ಯ ಸೇರಿದಂತೆ ದೇಶದ ಹಲವು ವಿಜ್ಞಾನಿಗಳು, ಸಂಶೋಧಕರು ಮತ್ತು ಪ್ರಾದ್ಯಾಪಕರು ಉಪನ್ಯಾಸ ನೀಡಲಿದ್ದಾರೆ.