ಎಲೆಕ್ಟ್ರಿಕ್ ಬಸ್ ಹೆಚ್ಚಳಕ್ಕೆ ಕ್ರಮ: ರಾ.ರೆಡ್ಡಿ

ಬೆಂಗಳೂರು, ಜು.೨೮- ರಾಜ್ಯ ವ್ಯಾಪಿ ಎಲ್ಲಿಯೂ ಸರಕಾರಿ ಬಸ್ ಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಜೊತೆಗೆ ಎಲೆಕ್ಟ್ರಿಕ್ ಬಸ್ ಗಳ ಸಂಖ್ಯೆಯೂ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿಂದು ಶಾಂತಿನಗರ ಕೇಂದ್ರ ಕಚೇರಿಯಲ್ಲಿ ಟಿಎಂಎಲ್ ಸ್ಮಾರ್ಟ್ ಮೊಬಿಲಿಟಿ ಸಿಟಿ ಲಿಮಿಟೆಡ್‌ನ ಮೊದಲ ಎಲೆಕ್ಟ್ರಿಕ್ ಪ್ರೊಟೊಟೈಪ್ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಕ್ತಿ ಯೋಜನೆಯಿಂದ ಎಲ್ಲಾ ನಿಗಮದ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪೂರಕವಾಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದ್ದು, ಒತ್ತಡ ಇರುವ ಕಡೆ ಬಸ್ ಗಳನ್ನು ಒದಗಿಸಲು ಯೋಜನೆ ನಡೆಸಲಾಗಿದೆ. ಹೀಗಾಗಿ, ಪೂರ್ವಭಾವಿ ಆಗಿ ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಎಲ್ಲಾ ಎಲೆಕ್ಟ್ರಿಕ್ ಬಸ್ ಗಳ ಸೇವೆ ಸಿಗಲಿದೆ ಎಂದರು.ಕೇಂದ್ರ ಸರ್ಕಾರದ ಪೇಮ್-೨ ಯೋಜನೆಯಡಿಯಲ್ಲಿ ೯೨೧ ಎಲೆಕ್ಟ್ರಿಕ್ ಹವಾನಿಯಂತ್ರಣ ರಹಿತ ಬಸ್ಸುಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಿವೆ ಎಂದ ಅವರು, ಇ-ಬಸ್ ಗಳು ಕಡಿಮೆ ವ್ಯಚ್ಚದಲ್ಲಿ ನಿರ್ವಹಣೆಯಾಗಲಿದೆ.ಇ-ಬಸ್ ಗಳಿಂದ ಯಾವುದೇ ತೊಂದರೆವಿಲ್ಲ.ಬಸ್ ಗಳನ್ನು ವಿಸ್ತರಿಸುವ ಚಿಂತೆಯೂ ಇದೆ ಎಂದು ಹೇಳಿದರು.
ಬಿಎಂಟಿಸಿ ನಿರ್ದೇಶಕಿ ಸತ್ಯಾವತಿ ಮಾತನಾಡಿ, ಟಾಟಾಮೋಟರ್ ಮೂಖಾಂತರ ಎಲೆಕ್ಟ್ರಿಕ್ ಬಸ್ ಗಳು ಬಂದಿದ್ದು, ಸದ್ಯಕ್ಕೆ ಒಂದು ಎಲೆಕ್ಟ್ರಿಕ್ ಬಸ್ ಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಅಂಗವಿಕಲರಿಗೆ ಮಹಿಳೆಯರಿಗೆ ಅನುಕೂಲ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಒಂದು ಬಸ್ಸಿನಲ್ಲಿ ೪೦ ಜನ ಪ್ರಯಾಣಿಕರಿಗೆ ಅವಾಕಾಶ ಇದೆ. ಚಾರ್ಜ್ ಗೆ ಏಕಕಾಲದಲ್ಲಿ ೨೦೦ ಕಿಲೋ ಚಾಲನೆ ಮಾಡಬಹುದು ಎಂದು ವಿವರಿಸಿದರು.