ಎಲೆಕೋಸಿನ ಪಕೋಡ

ಬೇಕಾಗುವ ಪದಾರ್ಥಗಳು:
ಎಲೆಕೋಸು – ೩೦೦ ಗ್ರಾಂ
ಕಡ್ಲೆಹಿಟ್ಟು – ಹಿಡಿಸುವಷ್ಟು
ಹಸಿಮೆಣಸಿನಕಾಯಿ – ೧೦
ಅಚ್ಚಖಾರದಪುಡಿ – ೪ ಚಮಚ
ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
ಓಂಕಾಳು – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ ಬದಲು ಇನೊ ಪುಡಿ – ಚಿಟಿಕೆ (ಗರಿಯಾಗಲು)

ವಿಧಾನ: ಎಲೆಕೋಸನ್ನು ನ್ಯೂಡಲ್ಸ್‌ಗೆ ಹೆಚ್ಚಿಕೊಳ್ಳುವ ಹಾಗೆ ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿ. ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ, ತಕ್ಕಷ್ಟು ನೀರು ಹಾಕಿ ಗಟ್ಟಿಯಾಗಿ ಕಲೆಸಿ, ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು. ಎಲೆಕೋಸಿನ ಬದಲಿಗೆ ಸಬ್ಬಸ್ಸಿಗೆ ಸೊಪ್ಪು ಮತ್ತು ಈರುಳ್ಳಿ ಹಾಕಿ ಸಬ್ಬಸ್ಸಿಗೆ ಪಕೋಡ ಮಾಡಬಹುದು.
(ಕಡ್ಲೆಹಿಟ್ಟು – ೧ ಪ್ರಮಾಣ ಮತ್ತು ಸೊಪ್ಪು ೩ ಪ್ರಮಾಣ)