ಎಲಿಮಲೆಯಲ್ಲಿ ಇಫ್ತಾರ್ ಸಂಗಮ-ಅನುಸ್ಮರಣೆ

ಸುಳ್ಯ, ಎ.೨೦- ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ಆಶ್ರಯದಲ್ಲಿ ವಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪಿ ಟಿ ಉಸ್ತಾದರ ಆಂಡ್ ಪ್ರಯುಕ್ತ ಇಫ್ತಾರ್ ಕೂಟ, ರಮಲಾನ್ ಕಿಟ್ ವಿತರಣೆ ಹಾಗೂ ಪ್ರಾರ್ಥನಾ ಸಂಗಮವು ಎಲಿಮಲೆ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು.
ಎಲಿಮಲೆ ಮಸೀದಿ ಮುದರ್ರ‍ಿಸರಾದ ಅಲ್ಹಾಜ್ ತೌಸೀಫ್ ಸಅದಿ ಹರೇಕಳ ಇವರು ಪ್ರಾರ್ಥನಾ ಸಂಗಮದ ನೇತೃತ್ವ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹರ್ಲಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀರ್ಮುಕ್ಕಿ ಮಸೀದಿಯ ಇಮಾಮರಾದ ಸೂಫಿ ಮುಸ್ಲಿಯಾರ್ ರವರು ಹಾಗೂ ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯ ಮಹ್ಮೂದ್ ಸಖಾಫಿ ಯವರು ಅನುಸ್ಮರಣಾ ಭಾಷಣಗೈದರು. ಎಲಿಮಲೆ ಜಮಾಅತಿಗೊಳಪಟ್ಟ ಕಡು ಬಡ ಕುಟುಂಬಗಳಿಗೆ ರಮಝಾನ್ ಕಿಟ್ ಹಾಗೂ ದರ್ಸ್ ವಿದ್ಯಾರ್ಥಿ ಗಳಿಗೆ ಹಾಗೂ ಉಸ್ತಾದರು ಗಳಿಗೆ ವಸ್ತ್ರ ವಿತರಣೆಯನ್ನು ಸಂಸ್ಥೆಯ ಅಧ್ಯಕ್ಷ ರಾದ ಲತೀಫ್ ಹರ್ಲಡ್ಕ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ. ಜೀರ್ಮಕ್ಕಿ ಮಸೀದಿ ಅಧ್ಯಕ್ಷರಾದ ಅಬ್ದುಲ್ಲ.ಜಿಎಸ್ ., ಜಮಾಅತ್ ಕಮಿಟಿ ಸಲಹೆಗಾರರಾದ ಯು ಎಂ ಅಬ್ದುಲ್ಲ, ನಸ್ರತ್ ಕಾರ್ಯದರ್ಶಿ ಸೂಫಿ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ , ಹಿರಿಯರಾದ ಮೊಹಮ್ಮದ್ ಕುಂಞಿ ಮೇಲೆ ಬೈಲು , ಮಹಮ್ಮದ್ ಕುಂuಟಿಜeಜಿiಟಿeಜ್ಞ ಹರ್ಲಡ್ಕ, ಜೀರ್ಮಕ್ಕಿ ಮಸೀದಿಯ ಕಾರ್ಯದರ್ಶಿ ಹನೀಫ್ ಜೀರ್ಮಕ್ಕಿ , ತರ್ಬಿಯತ್ ಅಧ್ಯಕ್ಷ ಫೈಝಲ್ ಜೀರ್ಮುಖಿ ,ಕಾರ್ಯದರ್ಶಿ ಜುನೈದ್ ಸಖಾಫಿ, ಮುಅಝಿನ್ ಶಫೀಕ್ ಹನೀಫಿ,ಸಮಿತಿಯ ಸದಸ್ಯರಾದ ಸುಲೈಮಾನ್ ಮೆತ್ತಡ್ಕ.ನಾಸಿರ್ ದೊಡ್ಡಂಗಡಿ . ಇಬ್ರಾಹಿಂ ಸುಪಾರಿ ಮಚಂಟ್ . ಅಬ್ದುಲ್ ಖಾದರ್ ಹತ್ತಿ ಮಾರಡ್ಕ ಇಬ್ರಾಹಿಂ ಪಳ್ಳಿ ಪಾಲು. ಹೈದರ್ ಹಾಜಿ .ಅಶ್ರಫ್ ದಿನಸಿ ಬಝಾರ್ ಹಾಗೂ ಜಮಾಅತರು ಉಪಸ್ಥಿತರಿದ್ದರು.