ಎರಡೇ ವರ್ಷದಲ್ಲಿ ವಿಜಯಪುರ ಮಾದರಿ ನಗರವಾಗಿ ನಿರ್ಮಾಣ: ಬಸನಗೌಡ ಪಾಟೀಲ್

ವಿಜಯಪುರ, ಎ.15-ನಗರದಲ್ಲಿ ಎಲ್ಲ ಕಡೆ ಓಪನ್ ಜಿಮ್, ಚಿಲ್ಡ್ರನ್ ಪಾರ್ಕ, ಯೋಗಾ ಪ್ಲಾಟಫಾರ್ಮ, ಗಾರ್ಡನ್ ಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಸೇರಿದಂತೆ ಸಿ.ಸಿ ರಸ್ತೆ, ಡ್ರೈನೇಜ್ ಮಾಡುವ ಕಾಮಗಾರಿಗಳು ಪ್ರಾರಂಭವಾಗಿವೆ, 247 ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ಸೇರಿದಂತೆ ನಗರದ ತುಂಬೆಲ್ಲ ಅಭಿವೃದ್ಧಿ ಕಾಮಗಾರಿಗಳಾಗುತ್ತಿದ್ದು ಇನ್ನೇನು ಎರಡೇ ವರ್ಷದಲ್ಲಿ ವಿಜಯಪುರ ನಗರವು ಮಾದರಿ ನಗರವಾಗಿ ನಿರ್ಮಾಣವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ವಿಜಯಪುರ ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳರವರು ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸನ್ 2019-20ನೇ ಸಾಲಿನ ಭೈರವ ನಗರದ ಶ್ರೀ ಸಿದ್ಧಿವಿನಾಯಕ ಮಂದಿರ ಹತ್ತಿರ ಸಮುದಾಯ ಭವನದ ನಿರ್ಮಿಸಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ ಎಲ್ಲ ಕಡೆ ಓಪನ್ ಜಿಮ್, ಚಿಲ್ಡ್ರನ್ ಪಾರ್ಕ, ಯೋಗಾ ಪ್ಲಾಟಫಾರ್ಮ, ಗಾರ್ಡನ್ ಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಸೇರಿದಂತೆ ಸಿ.ಸಿ ರಸ್ತೆ, ಡ್ರೈನೇಜ್ ಮಾಡುವ ಕಾಮಗಾರಿಗಳು ಪ್ರಾರಂಭವಾಗಿವೆ, 247 ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ಸೇರಿದಂತೆ ನಗರದ ತುಂಬೆಲ್ಲ ಅಭಿವೃದ್ಧಿ ಕಾಮಗಾರಿಗಳಾಗುತ್ತಿದ್ದು ಇನ್ನೇನು ಎರಡೇ ವರ್ಷದಲ್ಲಿ ವಿಜಯಪುರ ನಗರವು ಮಾದರಿ ನಗರವಾಗಿ ನಿರ್ಮಾಣವಾಗಲಿದೆ ಎಂದರು.
ನಗರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ನಗರದಲ್ಲಿ ಮುಂಬರುವ ದಿನಗಳಲ್ಲಿ ಪತ್ರಾಸ್À, ಗುಡಿಸಲು ಇರುವಂತ ಯಾವ ಬಡವರು ಇರುವುದಿಲ್ಲ ಕುಡಿಯುವ ನೀರಿನ ವ್ಯವಸ್ಥೆ, ಸಿ.ಸಿ ರಸ್ತೆ, ಡ್ರೈನೇಜ ವ್ಯವಸ್ಥೆ ಕಲ್ಪಿಸಿ ಸುಂದರವಾದ ನಗರ ನಿರ್ಮಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿದ 356.00 ಲಕ್ಷ ರೂ ಮೊತ್ತದಲಿ 2020-21ನೇ ಸಾಲಿನ 5054 ವಿಶೇಷ ಘಟಕ ಯೋಜನೆ ಅಡಿಯಲ್ಲಿ ವಿಜಯಪುರ ನಗರದಲ್ಲಿರುವ ಬಬಲೇಶ್ವರ ನಾಕಾದಲ್ಲಿ ಸರದಾರ್ ವಲ್ಲಭಾಯಿ ಪಟೇಲ್ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಪ್ರಾರಂಭವಾಗಿದ್ದು, ನಿರ್ಮಿಸಲಾದ ಒಟ್ಟು 45 ಮಳಿಗೆಗಳ ಪೈಕಿ ಶೇ 50 ರಷ್ಟು ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಲಾಗಿದ್ದು ಇನ್ನುಳಿದ ಶೇ 50 ರಷ್ಟು ಮಳಿಗೆಗಳನ್ನು ಸಾಮಾನ್ಯ ವರ್ಗದವರಿಗೆ ನೀಡಲಾಗುವದು ಈ ವಾಣಿಜ್ಯ ಮಳಿಗೆಗಳಿಂದಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂದರು.
ಶಾಸಕರು ಹಮ್ಮಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆ ಕೋವಿಡ್ ಲಸಿಕೆ ಉತ್ಸವದ ಅಂಗವಾಗಿ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡು, 45 ವರ್ಷ ಮೇಲ್ಪಟ್ಟ ಆ ಭಾಗದ ನಾಗರಿಕರಿಗೆ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶ್ರೀಹರಿ ಗೊಳಸಂಗಿ, ಸದಸ್ಯರಾದ ಶ್ರೀ ವಿಕ್ರಮ್ ಗಾಯಕವಾಡ, ವೈದ್ಯಾಧಿಕಾರಿಗಳಾದ ಡಾ. ಕೇಸರಸಿಂಗ್ ಗುಂಡಬಾವಡಿ,, ಮುಖಂಡರಾದ ಶ್ರೀ ಸಂಜಯ್ ಪಾಟೀಲ ಕನಮಡಿ, ಶ್ರೀ ಸಂತೋಷ ಪಾಟೀಲ, ಶ್ರೀ ಶ್ರೀನಿವಾಸ ಬೆಟಗೇರಿ, ಡಾ. ಬಿ.ಎಸ್.ಪಾಟೀಲ ನಾಗರಾಳ ಹುಲಿ, ಶ್ರೀ ಐ.ಬಿ. ಪಾಟೀಲ, ಶ್ರೀ ಸಿ.ಎಂ. ಪತಂಗಿ, ಶ್ರೀ ಗಿರೀಶ ಕುಲಕರ್ಣಿ, ಶ್ರೀ ಶರಣು ನಿಡಗುಂದಿ, ಶ್ರೀ ಎಸ್.ಎಮ್.ಮಠ, ಶ್ರೀ ರಾಜಶೇಖರ ಭಜಂತ್ರಿ, ಶ್ರೀ ಪ್ರಕಾಶ ಚವ್ಹಾಣ ಶ್ರೀ ನಾಗರಾಜ ಮುಳವಾಡ, ಶ್ರೀ ಶಂಕರ್ ಹೂಗಾರ, ಶ್ರೀ ಬಸಯ್ಯ ವಿಭೂತಿಮಠ, ಮಲ್ಲಿಕಾರ್ಜು ಹೆಳಂಗಳಿ, ಶ್ರೀ ವಿಠ್ಠಲ ಹಳ್ಳಿಕರ, ಶ್ರೀಮತಿ ಪ್ರೀತಿ ಮೋದಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.