ಎರಡೇ ದಿನಕ್ಕೆ ಕಿತ್ತೋದ ಐವಾನ್ ಶಾಹಿ ರಸ್ತೆ ಕಳಪೆ ಕಾಮಗಾರಿ: ತೆಗನೂರ ಆರೋಪ

Exif_JPEG_420

ಕಲಬುರಗಿ:ಜ.21: ಕಳಪೆ ಕಾಮಗಾರಿ ವೇಳೆ ಹಾಕಿದ್ದ ಡಾಂಬರ್? ಎರಡೇ ದಿನದಲ್ಲಿ ಕಿತ್ತು ಹೋಗಿರುವ ಆರೋಪ ಪ್ರಕರಣ ಜಿಲ್ಲೆಯ ಜಿಲ್ಲಾಧಿಕಾರಿ ರಸ್ತೆಯ ಎದುರುಗಡೆ ಹಾಕಿರುವ ಡಾಂಬರ್ ರಸ್ತೆ ನಡೆದಿರುತ್ತದೆ. ಕಳಪೆ ಕಾಮಗಾರಿ ಆರೋಪ ಕೇಳಿಬಂದಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ(ಎಚ್ ಶಿವರಾಮೇಗೌಡರ ಸಾರಥ್ಯದ) ಯುವ ಘಟಕ ಅಧ್ಯಕ್ಷ ಆನಂದ ತೆಗನೂರ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಹಾನಗರ ಪಾಲಿಕೆಯ ವತಿಯಿಂದ ಇಲ್ಲಿ ಡಾಂಬರ್ ರಸ್ತೆ ಹಾಕಿರುತ್ತಾರೆ.ಆದರೆ ಡಾಂಬರ್ ರಸ್ತೆ ಹಾಕಿ ಎರಡೇ ದಿನ ಆಗಿಲ್ಲ ರಸ್ತೆ ಕಿತ್ತು ಹೊರಗಡೆ ಬರುತ್ತಿದೆ.ಅಂದಾಜು 2 ರಿಂದ 4 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ನಿಯಮಾನುಸಾರವಾಗಿ ಕಾಮಗಾರಿ ಮಾಡದೆ ಇರೋದಕ್ಕೆ ಡಾಂಬರ್ ಕಿತ್ತು ಬರುತ್ತಿದೆ. ಸರ್ಕಾರದ ಹಣ ಪೆÇೀಲು ಮಾಡಿರುವ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿ ಗುತ್ತಿಗೆದಾರ ಕೈಚೆಲ್ಲಿದ್ದಾರೆ. ಡಾಂಬರು ರಸ್ತೆಯನ್ನು ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಹುತೇಕ ರಸ್ತೆ ಕಾಮಗಾರಿಗಳೆಲ್ಲವೂ ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಪಡೆದು ಶಾಸಕರ ಹಾಗೂ ಸಚಿವರ ಬೆಂಬಲಿಗರೇ ಮಾಡುತ್ತಿದ್ದಾರೆ.ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಳಪೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದರು.ಗ್ರಾಮದಲ್ಲಿ ಜನಸಂಚಾರವಿಲ್ಲದ ಕಡೆ ಸಿಸಿರಸ್ತೆ ಮಾಡುತ್ತಿದ್ದು, ಇದರು ಸಂಪೂರ್ಣ ಕಳಪೆಗುಣಮಟ್ಟದಿಂದ ಕೂಡಿದೆ. ಪ್ಲಾನ್ ಎಸ್ಟಿಮೇಟ್ ಪ್ರಕಾರ ಮಾಡಿರುವುದಿಲ್ಲ. ಗುಣಮಟ್ಟದ ಸಿಮೆಂಟ್ ಬಳಸಿಲ್ಲ, ಉತ್ತಮ ಮರಳು, ಜೆಲ್ಲಿ ಬಳಕೆ ಮಾಡಿಲ್ಲ ಎಂದು ಅವರು ಆರೋಪಿಸಿದರು.