ಎರಡೂ ಕೈಗಳಲ್ಲಿ ಚಿತ್ರ ಬಿಡಿಸಿ ಗಮನ ಸೆಳೆದ ವಿದ್ಯಾರ್ಥಿ

ಬೆಂಗಳೂರು, ಮಾ ೧೦- ಉತ್ತರ ಕನ್ನಡದ ಶಿರಸಿಯಲ್ಲಿರೋ ಪಂಚಲಿಂಗ ಎಂಬ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಭುತ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ನಿಜಕ್ಕೂ ನೋಡುಗರ ಗಮನ ಸೆಳೆದಿದ್ದಾರೆ.

ಓದುತ್ತಿರುವ ೬ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಎರಡು ಕೈಯಲಿ ಚಿತ್ರಬಿಡಿಸುವ ಮೂಲಕ ಆಶ್ಚರ್ಯ ಚಕಿತಗೊಳಿಸಿದ್ದಾರೆ. ಲೋಹಿತ್ ಚನ್ನಯ್ಯ ಎಂಬ ವಿದ್ಯಾರ್ಥಿ ಎರಡೂ ಕೈಯಲ್ಲಿ ಚಿತ್ರ ಬಿಡಿಸುವುದು ಕಂಡು ಬೆರಗಾಗಲಿದ್ದಾರೆ

ಈ ಶಾಲೆ ಮಕ್ಕಳು, ಮಂಕುತಿಮ್ಮನ ಕಗ್ಗವೋ, ಕುಮಾರವ್ಯಾಸ ಭಾರತವೋ, ವಚನದ ಸಾಲುಗಳೋ, ದಾಸರ ಸಂಕೀರ್ತನೆಗಳನ್ನ ಹಾಡುತ್ತಾರೆ.

ಇನ್ನು ಸಂಖ್ಯಾಬಂಧವಂತೂ ಇವ್ರಿಗೆ ನೀರು ಕುಡಿದಷ್ಟು ಸಲೀಸು. ಬೋರ್ಡ್ ನೋಡದೆಯೇ ಅದೆಲ್ಲವನ್ನ ಪಟ್ ಪಟಾಂತ ಬಿಡಿಸಿ ಚಪ್ಪಾಳೆ ಗಿಟ್ಟಿಸಬಲ್ಲರು. ಅದಕ್ಕಿಂತಲೂ ಜಾಸ್ತಿ ಇಲ್ಲಿನ ಮಕ್ಕಳಿಗೆ ಕನ್ನಡದ ಅದ್ಯಾವುದೇ ಶಬ್ದ ಹೇಳಿದ್ರೂ, ಅಷ್ಟೇ ನಿಖರವಾಗಿ ಇಂಗ್ಲೀಷ್ನಲ್ಲಿ ತಿರುಗಿಸಿ ನಮ್ಗೇ ಹೇಳಬಲ್ಲರು. ಹೀಗೆ ಅದ್ಯಾವ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೂ ಕಡಿಮೆಯಿಲ್ಲದಂತೆ ಈ ಮಕ್ಕಳು ತಮ್ಮ ಛಾಪು ಮೂಡಿಸುವರು.

ಇಷ್ಟೇ ಅಲ್ಲ ಎರಡೂ ಕೈಯಲ್ಲಿ ಪೇಂಟಿಂಗ್, ಬರೀ ಹತ್ತಿಯಲ್ಲಿ ಪೇಂಟಿಂಗ್, ಕಣ್ಮುಚ್ಚಿ ಬಿಡೋದ್ರೊಳಗೆ ಕ್ರಾಫ್ಟು, ನಾಟಕದ ಮೂಲಕ ಪಾಠದ ಬೋಧನೆ ಹೀಗೆ ಒಂದೊಂದು ರೀತಿಯ ವಿಶೇಷ ಪ್ರತಿಭೆಗಳಿವು. ಇಲ್ಲಿ ಒಂದರಿಂದ ೭ನೇ ತರಗತಿಯವರೆಗೆ ೫೭ ಮಕ್ಕಳು ಇದ್ದು, ಪೈಪೋಟಿಯ ನಡುವೆಯೂ ಮಕ್ಕಳ ನಡುವೆ ಟೀಂ ವರ್ಕ್ ಅನ್ನೋ ಹೊಂದಾಣಿಕೆ ಇದೆ. ವಿಶೇಷ ಅಂದ್ರೆ ಈ ಮಕ್ಕಳನ್ನ ಈ ಮಟ್ಟಿಗೆ ಬೆಳೆಸೋದರ ಹಿಂದೆ ಶಿಕ್ಷಕರ ಪಾತ್ರ ಮಹತ್ವದ್ದು.