ಎರಡೂವರೆ ಶತಕದತ್ತ ಆರ್.ಜೆ.ಮಂಜುಗೆ ಸನ್ಮಾನ

ಕಲಬುರಗಿ.ಏ.20:ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ನಿರೂಪಕ, ನಟ, ಆಕಾಶವಾಣಿ ಕಲಬುರಗಿಯ ಮಾಜಿ ಉಧ್ಘೋಷಕ, ಸೂಪರ್ ಹಿಟ್ಸ 93.5 ರೆಡ್ ಎಫ್ ನ ಮಾಜಿ ರೇಡಿಯೋ ಜಾಕಿ, ಸುದ್ದಿ ಸಮಯ ಟಿವಿ ಚಾನೆಲ್ ನ ವಾರ್ತಾ ವಾಚಕ, ಕುಶಾಗ್ರಮತಿ ಖರ್ಗೆ, ಜೈಕರವೇ ರತ್ನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಆರ್.ಜೆ.ಮಂಜು ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ 250 ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಹಿನ್ನೆಲೆಯಲ್ಲಿ ಇತ್ತಿಚೆಗೆ ಯಡ್ರಾಮಿಯ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕದ ಯಡ್ರಾಮಿ ತಾಲೂಕಾ ಘಟಕದ ವತಿಯಿಂದ ಸಗರನಾಡು ಕೋಗಿಲೆ ಸೀಜನ್-1 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಆಯೋಜಿಸಲಾಗಿತ್ತು. ಜೇವರಗಿ ಶಾಸಕÀ ಡಾ.ಅಜಯಸಿಂಗ್ ಅವರು ಆರ್.ಜೆ.ಮಂಜು ಅವರಿಗೆ ವಿಶೇಷವಾಗಿ ಸನ್ಮಾನಿಸಿದರು.
ಯಡ್ರಾಮಿಯ ಪೂಜ್ಯರು, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಿವಶರಣಪ್ಪ ಸೀರಿ, ಶಾಂತಪ್ಪ ಕೂಡಿ, ಕರವೆ ಉತ್ತರ ಕರ್ನಾಟಕದ ಅಧ್ಯಕ್ಷÀ ಡಾ.ಶರಣು ಬಿ ಗದ್ದುಗೆ, ಕರವೆ ಯಡ್ರಾಮಿ ತಾಲೂಕಾ ಅಧ್ಯಕ್ಷÀ ಡಾ.ವಿಶ್ವನಾಥ ಪಾಟೀಲ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.