ಎರಡು ಹುದ್ದೆ ನಿಭಾಯಿಸಲು ಸಾಧ್ಯವಿಲ್ಲದ್ದರೆ ರಾಜೀನಾಮೆ ನೀಡಿ

ದಾವಣಗೆರೆ.ಮೇ.೫; ಎರೆಡೆರಡು ಹುದ್ದೆ ನಿಭಾಯಿಸಲು ಸಾಧ್ಯವಾಗದಿದ್ದರೆ ಸಚಿವ ಸುಧಾಕರ್ ರಾಜೀನಾಮೆ ನೀಡಲಿ ಎಂದು ಮುಖ್ಯ ಮಂತ್ರಿಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.ಹೊನ್ನಾಳಿ ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು ಚಾಮರಾಜನಗರ ಆಸ್ಪತ್ರೆ ದುರಂತ, ಬಿಬಿಎಂಪಿ ಬೆಡ್ ಸಿಗದ ವಿಚಾರ ಕುರಿತು ಮಾತನಾಡುತ್ತಾ ಆರೋಗ್ಯ ಸಚಿವ ಕೆ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದರು. ಕೆಲ ಸಚಿವರು ತಮ್ಮ ಸ್ವಂತ ಕೆಲಸದಲ್ಲಿ, ಐಷಾರಾಮಿ ಜೀವನದಲ್ಲಿ ಬ್ಯುಸಿ ಇದ್ದಾರೆ.
ಆದರೆ ಜನರನ್ನ ರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ.ಕೆಲಸ ಮಾಡೋಕೆ ಆಗದೆ ಇದ್ದರೆ ಗೌರವಯುತವಾಗಿ ಮನೆಗೆ ಹೋಗಿ ಎಂದು ಹರಿಹಾಯ್ದರು.ಈ ರೀತಿ ಕೆಲಸ ಮಾಡೋಕಾ ಇವರು ಎರಡು ಹುದ್ದೇ ಪಡೆದಿದ್ದು ಪ್ರಧಾನಿ ಮೋದಿಯವರು ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಗಲಿರುಳು ಕೆಲಸ ಮಾಡುತಿದ್ದಾರೆ ಇವರಿಗೇನಾಗಿದೆ.ಕೆಲಸ ಮಾಡಲು ಸಾಧ್ಯವಾಗದಿದ್ದರೆ  ರಾಜೀ‌ನಾಮೆ ಕೊಟ್ಟು ಮನೆಗೆ ಹೋಗಿ ಎಂದರು.