ಎರಡು ಹನಿಗಳಿಂದ ಪೋಲಿಯೊ ವಿರುದ್ಧ ಗೆಲುವು

ಕಲಬುರಗಿ:ಮಾ.3: ನಮ್ಮ ದೇಶ ಪೋಲಿಯೋ ಮುಕ್ತವಾಗಿದೆ. ದೇಶದ ನೆರೆ-ಹೊರೆ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಇನ್ನೂ ಕಂಡುಬರುತ್ತಿರುವುದರಿಂದ ಅದು ನಮ್ಮ ದೇಶದ ಮಕ್ಕಳಿಗೆ ತಗುಲಬಾರದೆಂದು ಮುಂಜಾಗ್ರತೆಯಾಗಿ ಪೋಲಿಯೊ ಹನಿಯನ್ನು ಹಾಕಲಾಗುತ್ತಿದೆ. ಎರಡು ಹನಿಗಳು ಪೋಲಿಯೊ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿದೆ. ಐದು ವರ್ಷಗಳೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೊ ಹನಿಯನ್ನು ಹಾಕಿಸಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದ ಭಾನುವಾರ ಜರುಗಿದ ಜರುಗಿದ ಪೋಲಿಯೊ ಲಸಿಕಾಕರಣ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿಯನ್ನು ಹಾಕಿ ನಂತರ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗುರುರಾಜ ಕೈನೂರ, ಜಗನ್ನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ, ಸಿದ್ರಾಮ ಸೇರಿದಂತೆ ಮತ್ತಿತರರಿದ್ದರು.