ಎರಡು ಸಸಿ ನೆಟ್ಟರೆ ಹೊಸ ಕಟ್ಟಡಕ್ಕೆ ಅನುಮತಿ: ಮಹಾಪೌರ ವಿಶಾಲ ದರ್ಗಿ

ಕಲಬುರಗಿ, ಜೂ 05 : ಮಹಾನಗರ ಪಾಲಿಕೆ ವತಿಯಿಂದ ಕಲಬುರಗಿ ನಗರದಲ್ಲಿ ಹೊಸ ಕಟ್ಟಡಕ್ಕೆ ಅನುಮತಿ ಪಡೆಯುವರು ಕಡ್ಡಾಯವಾಗಿ ಮನೆ ಮುಂದೆ ಎರಡು ಸಸಿ ನೆಟ್ಟರೆ ಅನುಮತಿ ನೀಡಲಾಗುವುದೆಂದು ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ದರ್ಗಿ ಅವರು ಹೇಳಿದರು.
ಸೋಮವಾರದಂದು ಪರಿಸರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಗೆ ವ್ಯಾಪ್ತಿಯ ಗುಲಶ್ಚನ್ ಗಾರ್ಡನಲ್ಲಿ ಸಸಿಗಳಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಪರಿಸರ ಒಳ್ಳೆಯ ವಾತಾವರಣದಿಂದ ಕೂಡಿರಬೇಕಾದರೆ ತಾವೆಲ್ಲರೂ ಮನೆಯ ಮುಂದುಗಡೆ ಪ್ರತಿಯೊಂದು ಗಿಡಮರಗಳನ್ನು ಬೆಳೆಸಿ ಒಳ್ಳೆಯ ವಾತಾವರಣ ನಿರ್ಮಿಸಬೇಕೆಂದರು.
ನಗರದಲ್ಲಿ ಈಗಾಗಲೇ ಒಳ್ಳೆಯ ಉದ್ಯಾನ ವನಗಳಿಗೆ ಇನ್ನೂ ಒಂದು ಇದರ ಪಕ್ಕದಲ್ಲಿ ಒಳ್ಳೆಯ ಉದ್ಯಾನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಉಪ-ಆಯುಕ್ತರಾದ ಪ್ರಕಾಶ ರಜಪೂತ ಅವರು ಮಾತನಾಡಿ, ಪರಿಸರ ಉಳಿಸಬೇಕಾದರೆ ಪ್ರತಿಯೊಂದು ಮನೆಯಲ್ಲಿ ಸಸಿಗಳು ನೆಡಬೇಕು ಇದರ ಜೊತೆ ಮನೆಯ ಸುತ್ತಮುತ್ತಲ್ಲಿನ ವಾತಾವರಣವನ್ನು ಸ್ವಚ್ಪವಾಗಿಡಬೇಕೆಂದರು.
ಇದೇ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಶಿವನಗೌಡ ಪಾಟೀಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಮುನಫ್ ಪಾಟೀಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಭೀಮಾಶಂಕರ, ಪರಿಸರ ಅಭಿಯಂತರ ಸುಭಾಷ ಬಾಬು ಮೇಲಿನಕೆರೆ ಆರೋಗ್ಯಾಧಿಕಾರಿ ಡಾ. ವಿವೇಕಾನಂದ ಡೆಂಗೆ, ಸೇರಿದಂತೆ ಮಹಾನಗರ ಪಾಲಿಕೆ ಸಿಬ್ಬಂದಿಗಳು ಹಾಗೂ ಕಾರ್ಮಿಕರು ಹಾಜರಿದ್ದರು.