ಎರಡು ಸಮುದಾಯಗಳ ನಡುವೆ ಜಾಗದ ವಿಚಾರದಲ್ಲಿ ಗೊಂದಲ ಪೆÇಲೀಸರ ಸಮ್ಮುಖದಲ್ಲಿ ಇತ್ಯರ್ಥ

ಸಂಜೆವಾಣಿ ವಾರ್ತೆ
ಬೆಟ್ಟದಪುರ: ಆ.26:- ಸಮೀಪದ ಕೊಣಸೂರು ಗ್ರಾಮದ ಮಧ್ಯಭಾಗದಲ್ಲಿರುವ ಸರ್ಕಾರಿ ಜಾಗದ ಮಾಲೀಕತ್ವದ ಸಂಬಂಧ ಗ್ರಾಮದ ಮೇದಗಿರಿ ಸಮುದಾಯ ಹಾಗೂ ಕುಂಬಾರ ಶೆಟ್ಟಿ ಸಮುದಾಯದ ನಡುವೆ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದ್ದು, ಈ ಸಂಬಂಧ ಕುಂಬಾರ ಶೆಟ್ಟಿ ಜನಾಂಗದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್ ಹಾಗೂ ಪೆÇಲೀಸರ ಸಮ್ಮುಖದಲ್ಲಿ ಸಮಸ್ಯೆಯು ಇತ್ಯರ್ಥಗೊಂಡಿತು.
ಕೆಲ ದಿನಗಳ ಹಿಂದೆ ಮೇದಗಿರಿ ಸಮುದಾಯದವರು ಆ ಜಾಗದಲ್ಲಿ ಮೇದರ ಕೇತೇಶ್ವರ ಕ್ಷೇಮಾಭಿವೃದ್ಧಿ ಸಂಘ ಎಂಬ ನಾಮಫಲಕವನ್ನು ಅಳವಡಿಸಿದಾಗ ಗೊಂದಲ ಸೃಷ್ಟಿಯಾಗಿತ್ತು, ಮೇದಗಿರಿ ಸಮುದಾಯದವರು, ಕುಂಬಾರ ಶೆಟ್ಟಿ ಸಮುದಾಯದವರಿಗೆ ಈಗಾಗಲೇ ಸಮುದಾಯ ಭವನ ಮತ್ತು ರಂಗಮಂದಿರ ಎರಡು ಕಟ್ಟಡಗಳು ಅವರುಗಳೇ ಬಳಸುತ್ತಿದ್ದಾರೆ, ಮೇದಗಿರಿ ಸಮುದಾಯದವರಿಗೆ ಯಾವುದೇ ಕಟ್ಟಡಗಳು ಇಲ್ಲ ಆದ್ದರಿಂದ ಈ ಖಾಲಿ ಜಾಗವನ್ನಾದರೂ ಕೊಡಿ ಎಂದು ಅವರು ಬೇಡಿಕೆ ಇಟ್ಟಿದ್ದರು, ಇದೇ ವಿಚಾರವಾಗಿ ಕುಂಬಾರಶೆಟ್ಟಿ ಸಮುದಾಯದ ಸೋಮಶೇಖರ್ ಮಧ್ಯಪ್ರವೇಶಿಸಿ ಸಮುದಾಯ ಭವನ ಹಾಗೂ ರಂಗಮಂದಿರವನ್ನು ಕುಂಬಾರ ಶೆಟ್ಟಿ ಸಮುದಾಯದವರು ಬಳಕೆ ಮಾಡುವಂತೆ ಖಾಲಿ ಜಾಗವನ್ನು, ಮೇದಗಿರಿ ಸಮುದಾಯದವರಿಗೆ ಬಿಟ್ಟು ಕೊಡುವಂತೆ ತೀರ್ಮಾನಿಸಲಾಯಿತು.
ಈ ಸಂಬಂಧ ಸಿಪಿಐ ಪ್ರಕಾಶ್ ಮಾತನಾಡಿ ಗ್ರಾಮದಲ್ಲಿ ಕೋಮುಗಲಭೆ ಸೃಷ್ಟಿಯಾಗದಂತೆ ಸಹೋದರರಂತೆ ಎಲ್ಲಾ ಸಮುದಾಯದವರು ಅನ್ಯೂನ್ಯವಾಗಿ ಹೋಗಬೇಕು ಕಾನೂನಿನ ಚೌಕಟ್ಟಿನಲ್ಲಿ ಆಗುವ ಕೆಲಸಗಳಿಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಮುಖಂಡರಾದ ಮೂರ್ತಿ, ಪ್ರಭು, ಪಾಲಾಕ್ಷ, ಶಿವಣ್ಣ, ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ, ಜವರಯ್ಯ ಇದ್ದರು.
ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಜಾಗದ ಮಾಲೀಕತ್ವ ಸಂಬಂಧ ಬುಧವಾರ ಪೆÇಲೀಸ್ ಸಮ್ಮುಖದಲ್ಲಿ ಇತ್ಯರ್ಥವಾಯಿತು. ಸೋಮಶೇಖರ್ ಪ್ರಭು ಮೂರ್ತಿ ಪಾಲಾಕ್ಷ ಇದ್ದರು.