
ಬೀದರ,ಮಾ.19: ಕಳೆದ ಎರಡು ವರ್ಷಗಳ ಹಿಂದೆ ನಗರದ ಯಲ್ಲಾಲಿಂಗ ಕಾಲೋನಿಯಲ್ಲಿ ನಡೆದ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರ ಇಲಾಖೆಯು ಯಶಸ್ವಿಯಾಗಿದೆ ಎಂದು ಬೀದರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ.
ಮೃತನಾದ ಗಣೇಶ್ ಬಾಬುರಾವ ಮೂಲಗೆ ಮೂಲತಹ ಮನ್ನಳ್ಳಿ ಗ್ರಾಮದವನಾಗಿದ್ದು, ಬೀದರನ ಯಲ್ಲಾಲಿಂಗ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ಪತ್ನಿಯೊಂದಿಗೆ ವಾಸವಿದ್ದ 3 ನವೆಂಬರ 2021 ರಂದು ಇತ ಸೀಲಿಂಗ ಫ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತನಾದ ಗಣೇಶ್ ಬಾಬುರಾವ ಮೂಲಗೆ ಮೂಲತಹ ಮನ್ನಳ್ಳಿ ಗ್ರಾಮದವನಾಗಿದ್ದು ಬೀದರನ ಯಲ್ಲಾಲಿಂಗ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ಪತ್ನಿಯೊಂದಿಗೆ ವಾಸವಿದ್ದ 3 ನವೆಂಬರ 2021 ರಂದು ಇತ ಸೀಲಿಂಗ ಫ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಪತ್ನಿಯ ದುರಿನ ಮೇರೆಗೆ ಆತ್ಮಹತ್ಯೆ ಪ್ರಕಣವೆಂದು ನಗರದ ಪೆÇಲೀಸ್ ಠಾಣೆಯಲ್ಲಿ 174(ಸಿ) ಸಿ.ಅರ್.ಪಿ.ಸಿ ಕಾಯ್ದೆ ಅಡಿಯಲ್ಲಿ ಆತ್ಮಹತ್ಯೆ ಪ್ರಕಣವನ್ನು ದಾಖಲಿಸಿಕೊಳ್ಳಲಾಗಿತ್ತು ಎಂದರು.
ನಂತರ ಮರಣೋತ್ತರ ವರದಿಯಲ್ಲಿ ಇದು ಕೊಲೆಯೆಂದು ಸಾಭಿತಾದ ಹಿನ್ನೆಯಲ್ಲಿ 13 ಸೆಪ್ಟೆಂಬರ 2022 ರಂದು ನಗರದ ಪೆÇಲೀಸ ಠಾಣೆಯಲ್ಲಿ ಐಪಿಸಿ 302 ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು ಆದರು ಈ ಪ್ರಕರಣವನ್ನು ಬಹುದಿನಗಳಿಂದ ಪತ್ತೆ ಹಚ್ಚಲು ಆಗದ ಕಾರಣ ಈ ಪ್ರಕರಣ ಮುಂದಿನ ತನಿಖೆಯನ್ನು ನಡೆಸಲು 24 ಫೆಬ್ರವರಿ 2023 ರಂದು ಬೀದರ ಉಪಾಧೀಕ್ಷ ಕೆ.ಎಂ ಸತೀಶ್ ಹಾಗೂ ಬೀದರ ನೂತನ ಠಾಣೆಯ ನಿರೀಕ್ಷಕ ವೇಂಕಟೇಶ ಯಡಹಳ್ಳಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ತಂಡ ಸಚಿಸಲಾಗಿತ್ತು ಈ ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಆರೋಪಿತನ್ನೊಬ್ಬನಿಂದ ಮೃತನು ಡ್ರೈವರ ಕೆಲಸ ಕೊಡಿಸುವುದಾಗಿ 500 ರುಪಾಯಿ ತೆಗೆದುಕೊಂಡಿದ್ದ ಕೆಲಸ ಕೊಡಿಸದ ಹಿನ್ನೆಲೆಯಲ್ಲಿ ಆರೋಪಿತನು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಮೃತನನ್ನು ಮನೆಯಲ್ಲಿ ಹಲ್ಲೆ ಮಾಡಿ ಕುತ್ತಿಗೆ ಹಗ್ಗ ಹಾಗೂ ವೈರ ಬಿಗಿದು ಕೊಲೆ ಮಾಡಿ ನೇಣಿ ಹಾಕಿಕೊಂಡತೆ ಬಿಂಬಿಸಿ ಫರಾರಿಯಾಗಿದ್ದರು ಆದರೂ ಪೋಲಿಸರ ಚಾಣಾಕ್ಷ ತನಿಖೆಯಿಂದ ಆರೋಪಿಗಳು ಸಿಕ್ಕಿಬಿದ್ದಿದಾರೆ ಎಂದರು.
ಜೊತೆಗೆ ಜಿಲ್ಲಾಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮನೆಗಳ ಮೇಲೆ ಶುಕ್ರವಾರ ಬೀದರ ನಗರ ಹಾಗೂ ಬಸವಕಲ್ಯಾಣದಲ್ಲಿ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಓರ್ವ ಆರೋಪಿಯ ಮನೆಯಲ್ಲಿ ಮಾರಕಾಸ್ತ್ರ ದೊರೆತ್ತಿದ್ದು ಇನ್ನೋರ್ವ ಆರೋಪಿಯ ಮನೆಯಲ್ಲಿ ಮಾದಕ ವಸ್ತು ದೊರೆತ್ತಿವೇ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೋಲಿಸ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.