ಎರಡು ವರ್ಷಗಳ ನಂತರ ಸಂಭ್ರಮದಿಂದ ಮಕ್ಕಳ ನಡೆ ಶಾಲೆ ಕಡೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ7: ಮಹಾಮಾರಿ ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಳಿಂದ ಶಾಲೆಗಳ ಕಡೆ ಮುಖ ಹಾಕದ ಮಕ್ಕಳು ಇಂದಿನಿಂದ ಧೈರ್ಯವಾಗಿ ಶಾಲೆಗಳ ನಡೆ ಆರಂಭಿಸಿದರು.
ನಗರ ಅನೇಕ ಸರ್ಕಾರಿ ಶಾಲೆಗಳು ತಳಿರು ತೋರಣಗಳಿಂದ ಸಿಂಗರಿಸಿಕೊಂಡು ಮಕ್ಕಳಿನ್ನು ಉತ್ಸಾಹದಿಂದ ಸ್ವಾಗತಿಸಿದ್ದು ಅಲ್ಲದೆ ಕೋವಿಡ್ ನಿಯಮಾವಳಿಯಂತೆಯೇ ಪಾಲಕ ಪೋಷಕರಿಗೆ ಧೈರ್ಯವಾಗಿ ಮಕ್ಕಳನ್ನು ಕಳುಹಿಸುವಂತೆ ತಿಳಿ ಹೇಳುವ ಮೂಲಕ ಉತ್ಸಾಹಕ್ಕೆ ಸಾಕ್ಷಿಯಾದರು.
ಮಕ್ಕಳ ಈ ನಡೆ ಪಾಲಕ ಪೋಷಕರು ಹಾಗೂ ಶಿಕ್ಷಕರು ಮೊಗದಲ್ಲಿ ಮಂದಹಾಸ ಮೂಡಿದ್ದು, ಸಂಭ್ರಮ ಮನೆ ಮಾಡಿತ್ತು. ಶಾಲೆಗಳು ಹಸಿರು ತೋರಣದಿಂದ ಕಂಗೊಳಿಸುತ್ತಿದ್ದವು. ಶಾಲೆ ಆವರಣಕ್ಕೆ ಆಗಮಿಸುತ್ತಿದಂತೆ ಮಕ್ಕಳನ್ನು ಶಿಕ್ಷಕರು, ಖುಷಿಯಿಂದ ಸ್ವಾಗತಿಸಿದ್ದು ಸರ್ವೆ ಸಾಮಾನ್ಯವಾಗಿತು.
ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕ ವರ್ಷ ಸೇರಿ ಸ್ಥಳೀಯರು ಸಹಕಾರದಿಂದ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿಯಲ್ಲಿ ವಿದ್ಯಾರ್ಥಿಗಳಿಗೆ ಎತ್ತಿನ ಬಂಡಿ ಮೂಲಕ ವಿಭಿನ್ನವಾಗಿ ಸ್ವಾಗತಿಸಿದರು.

ಕೊರೋನಾ ಮೂರನೇ ಅಲೆಯ ಭೀತಿಯಿರುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಯ ಆವರಣದಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರಕಾರವು ಆದೇಶದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಮಾಸ್ಕ್ನನ್ನು ಧರಿಸಿ, ಸ್ಯಾನಿಟೈಸರ್ ಹಾಕಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಾಲೆಗೆ ಬರಮಾಡಿಕೊಂಡರು.
ಕಾರಿಗನೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಪುಷ್ಪಗಳನ್ನು ನೀಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತು
ರಾಜ್ಯಾದ್ಯಂತ 6ರಿಂದ 8ನೇ ತರಗತಿಯವರೆಗೆ ಶಾಲೆಯು ಪುನರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಪೆÇೀಷಕರು ಆತಂಕ ಪಡದೇ ಶಾಲೆಗೆ ಕಳುಹಿಸಬಹುದು ಎಂದು ಶಿಕ್ಷಕರು ಪೆÇೀಷÀಕ ವೃಂದದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಮನವಿ ಮಾಡಿದ್ದಾರೆ.