ಎರಡು ವರ್ಷಗಳ ಆಯವ್ಯಯ ಗುರುತಿಸಿ ಚಾಲ್ತಿ ಬಜೆಟ್ ಸಿದ್ದಪಡಿಸಿ: ಚಾಂದಕವಟೆ

ವಿಜಯಪುರ, ಮಾ.23-ಯಾವುದೇ ಒಂದು ಬಜೆಟ್ ತಯಾರಿಸಬೇಕಾದಲ್ಲಿ ಹಿಂದಿನ ಎರಡು ವರ್ಷಗಳ ಆಯವ್ಯಯವನ್ನು ಗುರುತಿಸಿ ಚಾಲ್ತಿ ಆಗಲಿರುವ ಬಜೆಟ್‍ನ್ನು ತಯಾರಿಸುವದರಿಂದ ಹಲವಾರು ಸಮಸ್ಯೆಗಳಿಗೆ ಮುಂಬರುವ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆಂದು ರಾಜ್ಯದ ಮತ್ತು ಕೇಂದ್ರದ ಆರ್ಥಿಕ ಪರಿಸ್ಥಿತಿ ಕುರಿತು ನಿವೃತ್ತ ಪ್ರಾಚಾರ್ಯ ಡಾ. ಎಂ.ಎಸ್.ಚಾಂದಕವಟೆಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ವಿಜಯಪುರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಮ್ಮ ದೇಶ ಇಂತಹ ಕೊರೊನಾ ಸಂದರ್ಭದಲ್ಲೂ ಹಿಂದೆ ಬೀಳದೇ ಬಹುಮಟ್ಟಿಗೆ ಸಬಲರಾಗಿದ್ದೇವೆಂದು ಹೇಳಿದರು.
ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಎಸ್.ಮದಭಾವಿ ಸ್ವಾಗತಿಸಿ ಪರಿಚಯಿಸಿದರು. ಡಾ. ವಿ.ಡಿ.ಐಹೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಹದೇವ ನಾಡಗೌಡ, ಶಶಿಧರ ಸಾತಿಹಾಳ, ಡಾ.ಡಿ.ಆರ್.ನಿಡೋಣಿ, ಪ್ರೊ. ಎ.ಬಿ.ಬೂದಿಹಾಳ, ಚೈತನಾ ಸಂಕೊಂಡ, ಎಸ್.ಪಿ.ಶೇಗುಣಸಿ, ಸುಭಾಸ ಕನ್ನೂರ, ಡಾ. ಭಾಗಾಯತ್, ವ್ಹಿ.ಎಂ. ಪ್ರಶಾಂತ ಕುಲಕರ್ಣಿ ಉಪಸ್ಥಿತರಿದ್ದರು.