ಎರಡು ಲಕ್ಷ ರೆಮ್ ಡಿಸಿವಿರ್ ಆಮದಿಗೆ ನಿರ್ಧಾರ: ಡಾ.ಸುಧಾಕರ್ ಪ್ರಕಟ

ಬೆಂಗಳೂರು, ಏ 23-ವಿದೇಶದಿಂದ ಒಂದೇ ಬಾರಿಗೆ ಎರಡು ಲಕ್ಷ ರೆಮ್ ಡೆಸಿವಿರ್ ವೈಲ್ ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದ್ದು, ಈ ಹಿನ್ನಲೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮ್ ಡಿಸಿವಿರ್ ವೈಲ್ ಗಳು ನಿರಂತರವಾಗಿ ಸರಬರಾಜಾಗುತ್ತಿವೆ. ಹೆಚ್ಚುವರಿಯಾಗಿ 25 ಸಾವಿರ ವೈಲ್ ಪಡೆಯಲು ಕೇಂದ್ರ ಸಚಿವರು ಡಿ.ವಿ.ಸದಾನಂದಗೌಡ ಅವಕಾಶ ಕಲ್ಪಿಸಿದ್ದಾರೆ ಎಂದರು.
ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಜತೆಗೂ ಮಾತುಕತೆ ನಡೆಸಿದ್ದು ಈ ತಿಂಗಳಲ್ಲೇ 60 ಸಾವಿರ ವೈಲ್ ಪೂರೈಸುವ ಭರವಸೆ ನೀಡಿದ್ದಾರೆ ಎಂದರು.
ಸಿಎಂ ಸೂಚನೆಯಂತೆ ಎರಡು ವಾರಗಳ ಒಳಗೆ ಎರಡು ಸಾವಿರ ಹಾಸಿಗೆಯಿರುವ ಐಸಿಯು ಒಳಗೊಂಡ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದರು.
ವಿಕ್ಟೋರಿಯಾ ಆಸ್ಪತ್ರೆಯ ಆವರಣ ಮತ್ತು
ಹೊಸ ಕಟ್ಟಡದ ಆವರಣದ ಎರಡು ಕಡೆ ಸೇರಿ 450 ಐಸಿಯು ಸಾಮರ್ಥ್ಯ ದ ಐಸಿಯು ಸ್ಥಾಪಿಸಲಾಗುತ್ತದೆ. ಈ ಪೈಕಿ 100 ವೆಂಟಿಲೇಟರ್ ಅಳವಡಿಸಲಾಗುವುದು ಎಂದು ತಿಳಿಸಿದರು.