ಎರಡು ಲಕ್ಷ ಪರಿಹಾರ ವಿತರಣೆ

ಜೇವರ್ಗಿ :ಜು.27: : ತಾಲೂಕಿನ ಬಿರಾಳ ಬಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಮೇಲ್ಚಾವಣಿ ಕುಸಿದು ಮಹಿಳೆಯು ಮರಣ ಹೊಂದಿದ್ದು, ಘಟನಾ ಸ್ಥಳಕ್ಕೆ ದಂಡಾಧಿಕಾರಿ ಶ್ರೀಮತಿ ರಾಜೇಶ್ವರಿ ಎಸ್ ಪಿ ಯವರು ಬೇಟಿ ನೀಡಿ ಸರ್ಕಾರದ ವತಿಯಿಂದ ಮೃತಳ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗುರುಲಿಂಗಪ್ಪ ಗೌಡ ಆಂದೋಲ, ರಾಜಶೇಖರ್ ಸೀರಿ, ಪರಮೇಶ ಬಿರಾಳ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.