ಎರಡು ಲಕ್ಷ ಗಡಿ ದಾಟಿದ ಸೋಂಕು: ಜನತಲ್ಲಣ

ನವದೆಹಲಿ,ಏ.೧೬-ದೇಶದಲ್ಲಿ ಕೊರೊನಾ ಸೋಂಕು ಮತ್ತೊಮ್ಮೆ ೨ ಲಕ್ಷ ಗಡಿ ದಾಟಿ ದಾಖಲೆ ಬರೆದಿದೆ. ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಳ್ಳುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಜತೆಗೆ ಜನರನ್ನು ಆತಂಕ ಮತ್ತು ತಲ್ಲಣ ಮೂಡಿಸಿದೆ.
ಕಾಣದ ವೈರಿಯ ವಿರುದ್ದ ಹೋರಾಡಲು ದೇಶದಲ್ಲಿ ಲಸಿಕೆ ನೀಡಿಕೆ ಆರಂಭವಾದ ನಂತರವೂ ಗಣನೀಯವಾಗಿ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ಇಂದೂ ಕೂಡ ದೇಶದಲ್ಲಿ ೨,೧೭,೩೫೩ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ೧,೧೮೫ ಮಂದಿ ಮೃತಪಟ್ಟಿದ್ದು, ಇಂದೂ ೧,೧೮,೩೦೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ೧,೪೨,೯೧,೯೧೭ ಮಂದಿಗೆ ಸೋಂಕು ಏರಿಕೆಯಾಗಿದೆ. ಇಲ್ಲಿಯತನಕ ದೇಶದಲ್ಲಿ ೧,೨೫,೪೭,೮೬೬ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ ೧,೭೪,೩೦೮ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ಮುಂಬೈ ಹಿಂದಿಕ್ಕಿದ ದೆಹಲಿ:
ದೇಶದಲ್ಲಿ ಸೋಂಕು ಏರಿಕೆ ಕಂಡ ನಗರಗಳಲ್ಲಿ ಇದುವರೆಗೂ ಮುಂಬೈ ದೇಶದಲ್ಲಿ ಮೊದಲ ಸ್ಥಾನದಲ್ಲಿತ್ತು. ಇದೀಗ ಮುಂಬೈ ನಗರವನ್ನು ಹಿಂದಿಕ್ಕಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನ ಪಡೆದಿದೆ. ದೆಹಲಿಯಲ್ಲಿ ಪ್ರತಿದಿನ ಸರಾಸರಿ ೧೭ ಸಾವಿರಕ್ಕೂ ಅಧಿಕ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ.
ಇನ್ನೂಳಿದಂತೆ ಮಹಾರಾಷ್ಟ್ರದಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಲ, ಆಂಧ್ರ ಪ್ರದೇಶ, ರಿಯಾನ, ಚಂಡಿಘಡ, ಛತ್ತೀಸ್‌ಗಡ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ನಾಗಾಲೋಟದಲ್ಲಿ ಸಾಗುತ್ತಿದೆ. ಇದರಿಂದ ದೇಶದಲ್ಲಿ ನಿತ್ಯ ದಾಖಲೆಯ ಪ್ರಮಾಣದಲ್ಲಿ ಸೋಂಕು ಏರಿಕೆ ಕಾಣುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಸಕ್ರಿಯ ಪ್ರಕರಣ ಏರಿಕೆ:
ದೇಶದಲ್ಲಿ ನಿತ್ಯ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ. ಸೋಂಕು ಪ್ರಕರಣಗಳ ರೀತಿಯಲ್ಲಿಯೇ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯ ದೇಶದಲ್ಲಿ ೧೫,೬೯,೭೪೩ ಮಂದಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ೧೪ ಲಕ್ಷಕ್ಕೂ ಅಧಿಕ ಮಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕಾಣಿಸಿಕೊಂಡಿದೆ. ಇದು ಆತಂಕಕ್ಕೆ ಎಡೆಮಾಡಿದೆ.
ಈ ನಡುವೆ ದೇಶದಲ್ಲಿ ೧೧,೭೨,೨೩,೫೦೯ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ.

ಇಂದೂ ಕೂಡ ೨ ಲಕ್ಷ ಗಡಿ ದಾಟಿದ ಕೊರೊನಾ.

೧ ಲಕ್ಷಕ್ಕೂ ಅಧಿಕ ಮಂದಿ ಬಿಡುಗಡೆ

೧,೧೮೫ ಮಂದಿ ಸಾವು

ಮುಂಬೈ ಹಿಂದಿಕ್ಕಿದ ದೆಹಲಿ

ಎರಡು ತಿಂಗಳಲ್ಲಿ ೧೪ ಲಕ್ಷ ಸಕ್ರಿಯ ಪ್ರಕರಣ ಏರಿಕೆ

೨೬,೩೪ ಕೋಟಿಗೆ ಲಸಿಕೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿದೆ.
ದೇಶದಲ್ಲಿ ನಿನ್ನೆ ೧೪,೭೩,೨೧೦ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ ೨೬,೩೪,೭೬,೨೬೫ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.