ಎರಡು ಮನೆಗಳ್ಳತನ ಪೊಲೀಸ್ ಭೇಟಿ ಪರಿಶೀಲನೆ

ಲಿಂಗಸೂಗೂರು.ಏ೨೬-ಪಟ್ಟಣದಲ್ಲಿ ಎರಡು ಮನೆಗಳು ಕಳ್ಳತನವಾಗಿರುವ ಬಗೆಗೆ ವರದಿಯಾಗಿದ್ದು ಕಳ್ಳತನವಾದ ಸ್ಥಳಗಳಿಗೆ ಪಿಎಸ್‌ಐ ಪ್ರಕಾಶ ಡಂಬಳರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಹೊಸ ಎನ್,ಜಿ ಓ ಕಾಲೋನಿಯಲ್ಲಿ ಎರಡು ಮನೆಗಳಲ್ಲಿ ರಾತ್ರಿ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನವಾಗಿಲ್ಲ ಎನ್ನಲಾಗುತ್ತಿದೆ ಮಹ್ಮದ್ ತಂ.ಹುಚ್ಚುಸಾಬ ಎನ್ನುವವರು ಮನೆಯನ್ನು ಬೀಗಹಾಕಿ ಬೇಸಿಗೆಯಾದ್ದರಿಂದ ಮಹಡಿ ಮೇಲೆ ಮಲಗಿದಾಗ ಕಳ್ಳರು ಬೀಗಮುರಿದು ಒಳಹೊಕ್ಕೆ ಶರ್ಟಿನ ಜೇಬಿಲ್ಲಿರುವ ೫೨೦೦ ಕದ್ದಿದ್ದಾರೆ ಹಾಗೂ ಕೇದಾರ ತಂ.ಮಲ್ಲಯ್ಯನವರ ಮನೆಯಲ್ಲಿ ಬೀಗಹಾಕಿಕೊಂಡು ಊರಿಗೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಅವರ ಮನೆಯ ಬೀಗ ಮುರಿದು ಮನೆಯಲಿರುವ ಬೆಳ್ಳಿ ಸಮೆಗಳನ್ನು ಕದ್ದುಕೊಂಡು ಹೋಗಿದ್ದಾರೆ. ಎಂದು ವರದಿಯಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಸಣ್ಣಪುಟ್ಟ ಕಳ್ಳತನಗಳು ಹೆಚ್ಚುತ್ತಿದ್ದು ಪೆಟ್ರೋಲ್ ಕದಿಯುವುದು ದ್ವಿಚಕ್ರ ವಾಹನಗಳ ಚಕ್ರ ಕಳ್ಳತನ ಮಾಡುವುದು ನೀರಿನ ಪಂಪ್ ಕಳ್ಳತನ ಮಾಡುವುದು ಸೇರಿದಂತೆ ಕಿರಾಣಿ ಅಂಗಡಿಗಳ ಮುಂದೆ ಇಟ್ಟಿರುವ ಅಡುಗೆ ಎಣ್ಣೆಯ ಕ್ಯಾನ್‌ಗಳನ್ನು ಕದಿಯುವುದು ಸೇರಿದಂತೆ ಹಲವು ಸಣ್ಣಪುಟ್ಟ ಕಳ್ಳತನಗಳು ಹೆಚ್ಚಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.