ಎರಡು ಬೈಕ್‍ಗಳ ಮುಖಾ ಮುಖಿ ಡಿಕ್ಕಿಃ ಸ್ಥಳದಲ್ಲೇ ಮೂವರು ಸಾವು

ವಿಜಯಪುರ, ನ.5-ಎರಡು ಬೈಕ್‍ಗಳ ನಡುವೆ ಪರಸ್ಪರ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಬಬಲೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮದ್ಯಾಹ್ನ 2-30 ರ ವೇಳೆಯಲ್ಲಿ ನಡೆದಿದೆ.
ಬಬಲೇಶ್ವರ ತಾಲೂಕಿನ ಚಿಕ್ಕಗಲಗಲ ಗ್ರಾಮದ ಹತ್ತಿರ ಚಿಕ್ಕಗಲಗಲಿಯಿಂದ-ನಂದಿ ಸಕ್ಕರೆ ಕಾರ್ಖಾನೆ ಕಡೆಗೆ ಹೊರಟ ಹೋಂಡಾ ಶೈನ್ ದ್ವಿಚಕ್ರ ವಾಹನ ಹಾಗೂ ನಂದಿ ಸಕ್ಕರೆ ಕಾರ್ಖಾನೆ ಕಡೆಯಿಂದ ಚಿಕ್ಕಗಲಗಲ ಕಡೆಗೆ ಹೊರಟ ಪಲ್ಸ್ ದ್ವಿಚಕ್ರ ವಾಹನಗಳು ಮುಖಾ ಮುಖ ಡಿಕ್ಕಿಯಾಗಿವೆ.
ಈ ಅಪಘಾತದಲ್ಲಿ ಹೋಂಡಾ ಶೈನ್ ದ್ವಿಚಕ್ರ ವಾಹನದಲ್ಲಿದ್ದ ತೊದಲಬಾಗಿ ಗ್ರಾಮದವರೆನ್ನಲಾದ ಲಕ್ಷ್ಮಣ ರಾಮಪ್ಪ ಮಾದರ ಮತ್ತು ಕಾಶಿಬಾಯಿ ಲಕ್ಷ್ಮಣ ಮಾದರ ಇವರು ಸೇರಿದಂತೆ ಪಲ್ಸ್ ದ್ವಿಚಕ್ರ ವಾಹದಲ್ಲಿದ್ದ ಗಲಗಲಿಯ ಅನೀಲ ರಾಚಣ್ಣ ಮೇಳಗೇರಿ ಈ ಮೂವರೂ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಅಲ್ಲದೇ ಗಲಗಲಿಯ ಶಿವಪೂಜಯ್ಯ ಶ್ರೀಶೈಲ ಹಿರೇಮಠ ಎಂಬಾತನಿಗೆ ಗಾಯವಾಗಿದ್ದು ಗಲಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.