ಎರಡು ಪೆÇಲೀಸ್ ಜೀಪ್‍ಗಳಿಗೇ ಪೆÇಲೀಸ್ ಆಯುಕ್ತರು ದಂಡ

ಮೈಸೂರು,ಜ.19:- ಕಾನೂನು ಪಾಲಿಸಲು ಹೇಳುವವರೇ ಖುದ್ದು ಕಾನೂನು ಪಾಲಿಸದಿದ್ದರೆ ಹೇಗೇ? ಅಂತಹ ವಿಚಿತ್ರ ಘಟನೆಯೊಂದು ಮೈಸೂರಿನಲ್ಲಿ ನಡೆದಿದ್ದು, ವಾಹನ ನಿಲುಗಡೆ ನಿಷೇಧ (ನೋ ಪಾರ್ಕಿಂಗ್) ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಪೆÇಲೀಸ್ ಜೀಪ್ ಗಳಿಗೇ ನಗರ ಪೆÇಲೀಸ್ ಆಯುಕ್ತರು ದಂಡ ವಿಧಿಸಿದ್ದಾರೆ.
ಮೈಸೂರಿನ ಅರಸು ರಸ್ತೆಯಲ್ಲಿ ಪೆÇಲೀಸರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಪೆÇಲೀಸ್ ಜೀಪ್ ಗಳನ್ನು ನಿಲ್ಲಿಸಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪೆÇೀಟೋ ಕ್ಲಿಕ್ಕಿಸಿ ನಗರ ಪೆÇಲೀಸ್ ಆಯುಕ್ತರಾದ ಬಿ.ರಮೇಶ್ ಅವರಿಗೆ ಕಳುಹಿಸಿದ್ದರು ಎನ್ನಲಾಗಿದೆ. ಇದೀಗ ನಗರ ಪೆÇಲೀಸ್ ಆಯುಕ್ತರು ಜೀಪ್ ನೋಂದಣಿ ಸಂಖ್ಯೆ ಕೆಎ55ಜಿ0376, ಹಾಗೂ ಕೆಎ5550377 ಇದರ ಮಾಲೀಕರಿಗೆ ತಲಾ ಒಂದೊಂದು ಸಾವಿರದಂತೆ ದಂಡ ವಿಧಿಸಿದ್ದಾರೆ.
ಪೆÇಲೀಸರು ಸಾರ್ವಜನಿಕರಿಗೆ ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು ಎಂದು ಹೇಳುವುದಷ್ಟೇ ಅಲ್ಲ, ತಾವೂ ಕೂಡ ಅದನ್ನು ಪಾಲನೆ ಮಾಡಬೇಕು. ಹಾಗಿದ್ದಾಗ ಮಾತ್ರ ಸಾರ್ವಜನಿಕರೂ ಕೂಡ ಕಾನೂನನ್ನು ಪಾಲಿಸುತ್ತಾರೆ. ಆ ಉದ್ದೇಶದಿಂದಲೇ ದಂಡ ವಿಧಿಸಿರುವುದಾಗಿ ನಗರ ಪೆÇಲೀಸ್ ಆಯುಕ್ತರು ಹೇಳಿದ್ದಾರೆ.