ಎರಡು ದಿನದ ಹೆಣ್ಣು ಶಿಶು ಪತ್ತೆ

ವಿಜಯಪುರ, ನ.9-ಜಿಲ್ಲೆಯ ನಿಡಗುಂದಿ ತಾಲೂಕಿನ ಗೋನಾಳ-ನಿಡಗುಂದಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ದಿನಾಂಕ:05-11-2021 ರಂದು ಅಂದಾಜು ಎರಡು ದಿನದ ಹೆಣ್ಣು ಶಿಶುವು ಪತ್ತೆಯಾಗಿರುತ್ತದೆ. ಈ ಮಗುವು 2.5 ಕೆ.ಜಿ. ಆಗಿದ್ದು, ಗೋಧಿ ಬಣ್ಣ ಹೊಂದಿರುತ್ತದೆ.
ಈ ಹೆಣ್ಣು ಶಿಶುವಿನ ಜೈವಿಕ ಪಾಲಕರು ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ಹಾಗೂ ದೂ.ಸಂ : 08352-276354, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮೊ : 9886122292 ಇವರನ್ನು ಸಂಪರ್ಕಿಸಬೇಕು ಎಂದು ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ದೀಪಾಕ್ಷಿ ಜಾನಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.