ಎರಡು ದಿನದಲ್ಲಿ ಜೆಡಿಎಸ್ ಎರಡನೇ ಪಟ್ಟಿ: ಎಚ್‍ಡಿಕೆ

ಮೈಸೂರು: ಮಾ.28:- ಇನ್ನೆರಡು ದಿನಗಳಲ್ಲಿ ಜಾತ್ಯಾತೀತ ಜನತಾದಳದ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಶಾಸಕ ಸಾ.ರಾ.ಮಹೇಶ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ದಿನ ಪಂಚರತ್ನ ರಥಯಾತ್ರೆ ನಾಡಿನ ಜನತೆಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸ ಮಾಧ್ಯಮದವರು ಮಾಡಿದ್ದೀರಾ. ಮಾಧ್ಯಮದವರಿಗೆ ವೈಯಕ್ತಿಕವಾಗಿ, ಪಕ್ಷದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದರು. ನಿನ್ನೆ ದಿನದ ಕಾರ್ಯಕ್ರಮಕ್ಕೆ ಹಲವು ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಬಂದಿದದ್ದರೂ ಕಾರ್ಯಕ್ರಮ ಹೇಗೆ ನಡೆಯುತ್ತೆ ಅನ್ನೋ ಕುತೂಹಲಕ್ಕೂ ಅನೇಕರು ಬಂದಿದ್ದಾರೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಮಾಲೀಕರು, ಚಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ್ದಾರೆ. ಪೆÇಲೀಸರು, ಹೋಮ್ ಗಾಡ್ರ್ಸ್ ಅವರೂ ಕೂಡ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಆಗಿದ್ದಾರೆ. ವಾಹನಗಳ ಕಳಿಸಲು ಅಧಿಕಾರಿಗಳು ಸಹಕಾರ ನೀಡಿದ್ದಾರೆ. ರಾತ್ರಿ 1ಗಂಟೆವರೆಗೂ ಕೆಲಸ ಮಾಡಿದ್ದಾರೆ. ನಾವು ಹಣ ಕಟ್ಟಿದ್ರೂ ಅವರ ಸಹಕಾರ ನಮಗೆ ಇತ್ತೆಂದು ಸ್ಮರಿಸಿದರು.
ನರೇಂದ್ರ ಮೋದಿಯವರನ್ನ ಸಮಾದಿ ಮಾಡಲು ಹೊರಟಿದ್ದಾರೆ ಅಂತ ಹೇಳ್ತಿದ್ದೀರಾ. ಕರ್ನಾಟಕದಲ್ಲಿ ನೆರೆ ಬಂದಾಗ ಸಮಾಧಾನ ಪಡಿಸುವ ಕೆಲಸ ಮಾಡಲಿಲ್ಲ. ರೈತ ಕುಟುಂಬದ ಆತ್ಮಹತ್ಯೆ ಆದಾಗ ಅವರಿಗೆ ಸಂತಾಪ ಹೇಳಲಿಲ್ಲ. ಈಗ ಕರ್ನಾಟಕಕ್ಕೆ ಬಂದು ಜೀವ ಉಳಿಸಿ ಅಂತ ಕೇಳುತ್ತಿದ್ದೀರಿ. ಕನ್ನಡಿಗರಿಗೆ ಏನು ಮಾಡಿದ್ದೀರಿ ನೀವು? ಬೆಳಗಾವಿಯಲ್ಲಿ ಗಡಿ ವಿಚಾರ ಬಂದಾಗ ನಿಮ್ಮ ಪರ ನಿಲುತ್ತೀವಿ ಅಂತ ಹೇಳಲಿಲ್ಲ. ನಿಮಗೆ ಕನ್ನಡಿಗರ ಮತ ಮಾತ್ರ ಬೇಕು. ಮೇಕೇದಾಟು ಯೋಜನೆಗೆ ಒಂದು ಸಾವಿರ ಕೋಟಿ ಎಲ್ಲಿ ಸಾಲುತ್ತದೆ. ಪುಸ್ತಕದಲ್ಲಿ ತೋರಿಸೋಕಷ್ಟೇ, ಫಲಾನುಭವಿಗಳ ಕಾರ್ಯಕ್ರಮ ಅಂತ ಮಾಡುತ್ತಿದ್ದೀರಿ. ಅಧಿಕಾರಿಗಳಿಗೆ ಜನ ಕರೆದುಕೊಂಡು ಬನ್ನಿ ಅಂತ ಒತ್ತಾಯ ಮಾಡುತ್ತಿದ್ದೀರಿ. ಬಿಜೆಪಿ ಸಿಂಬಲ್ ಹಾಕ್ಕೊಂಡು ಸರ್ಕಾರದ ಕಾರ್ಯಕ್ರಮ ಮಾಡುತ್ತಿದ್ದೀರಿ, ಈಗ ಶಂಕು ಸ್ಥಾಪನೆ ಮಾಡುತ್ತಿದ್ದೀರಾ, ನೀವು ಮಾಡುವ ಶಂಕು ಸ್ಥಾಪನೆಗೆ ಮುಂದೆ ಬರುವ ಸರ್ಕಾರ ಹಣ ಕೊಡಬೇಕು. ನೀವು ಎಲ್ಲಿ ಹಣ ಮೀಸಲಿಟ್ಟಿದ್ದೀರಿ? ಎಂದರು.
ಪಂಚರತ್ನ ಯಾತ್ರೆ ಮುಂದುವರೆಯಲಿದ್ದು, ಎ.7 ಪಿರಿಯಾಪಟ್ಟಣಕ್ಕೆ ಆಗಮಿಸುತ್ತೇನೆ. ಎ.4-5 ಹನೂರು, ಎ.2 ಗುಂಡ್ಲುಪೇಟೆ ಹಾಗೂ 10 ರಂದು ಚಿತ್ರದುರ್ಗಕ್ಕೆ ಹೋಗುತ್ತಿದ್ದೇನೆ. ನನಗಾದ ಅನುಭವ ಹೇಳುತ್ತಿದ್ದೇನೆ. ಸಿಎಂ ದಿನಕ್ಕೆ ಐದು, ಹತ್ತು ಪೇಜ್ ಸರ್ಕಾರದ ಅಭಿವೃದ್ಧಿ ಜಾಹೀರಾತು ಕೊಡುತ್ತಿದ್ದಾರೆ. ಆದರೆ ಅದು ಜಾಹೀರಾತಿಗೆ ಮಾತ್ರ ಸೀಮಿತವಾಗಿದೆ. ಕಲ್ಬುರ್ಗಿ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲಿ ಬಡತನ ಮತ್ತು ಅಪೌಷ್ಟಿಕತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಜಿಲ್ಲಾ ಆರೋಗ್ಯ ಇಲಾಖ್ಯೆ ವರದಿ ನೀಡಿದೆ. ಶೇ.35 ಕುಟುಂಬಗಳಲ್ಲಿ ಅನಾಹುತ ಆಗುತ್ತಿದೆ. 5 ವರ್ಷದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಹತ್ತು ಜಿಲ್ಲೆಗಳಲ್ಲಿ ಆಗುತ್ತಿರುವ ಅಪೌಷ್ಟಿಕತೆ ಸರಿಪಡಿಸಲು ಆಗುತ್ತಿಲ್ಲವೆಂದರು. ಸಮಾವೇಶದ ಮೂಲಕ ಸಂದೇಶ ಹೇಳಿದ್ದೇನೆ. ನಾಡಿನ ಬಡ ಜನತೆಯ ಜೀವನ ಸರಿಪಡಿಸಬೇಕು. 2047ರ ಅಮೃತ ಕಾಲ ನಾನು ಕೇಳುತ್ತಿಲ್ಲ. ಮುಂದಿನ ಐದು ವರ್ಷದ ಸಂಪೂರ್ಣ ಬಹುಮತದ ಸರ್ಕಾರ ಕೇಳುತ್ತಿದ್ದೇನೆ.
ಐದು ವರ್ಷಗಳಲ್ಲಿ ರಾಮರಾಜ್ಯ ಮಾಡುತ್ತಿನಿ. ಅದಕ್ಕೆ ಎಲ್ಲಾ ರೀತಿಯ ಸಿದ್ದವಾಗಿದ್ದೇನೆಂದರು. ಎಚ್‍ಡಿಕೆಯಿಂದ ಸ್ವಾಮೀಜಿಗೆ ಬ್ಲಾಕ್ ಮೇಲ್ ವಿಚಾರವಾಗಿ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಸ್ವಾಮೀಜಿಗೆ ಯಾವ ಬ್ಲಾಕ್‍ಮೇಲ್ ಮಾಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಕ್ರಾಪ್ ಮಾಡ್ತೀನಿ ಅಂತ ಹೇಳುತ್ತಾರೆ. ಬಿಜೆಪಿ 9ಶೆಡ್ಯುಲ್ ಅದೇ ಆಗೋದಿಲ್ಲ. ಈಗ ಒಕ್ಕಲಿಗ, ವೀರಶೈವರಿಗೆ ಮೀಸಲಾತಿ ಹೆಚ್ಚಳದ ಹೆಸರಲ್ಲಿ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ಯಾರೂ ಕೊಡಲಿಲ್ಲ, ನಾನು ಕೊಟ್ಟೆ ಅಂತ ಬೊಮ್ಮಾಯಿ ಹೇಳುತ್ತಿದ್ದಾರೆ. ಚುನಾವಣೆ ಘೋಷಣೆ ಅಂದರೆ ಇದ್ಯಾವುದೂ ಬರಲ್ಲ ಎಂದರು.
ಮುಸ್ಲಿಂ ಮೀಸಲಾತಿ ವಿಚಾರವಾಗಿ ಪ್ರತಿಕ್ರಯಿಸಿ, ಅದು ಅವರ ಪ್ಲಾನ್, ಷಡ್ಯಂತ್ರ ಮಾಡಿ ಮಾಡಿದ್ದಾರೆ. ಈ ರಾಜ್ಯದಲ್ಲಿ ಬೆಂಕಿ ಹಚ್ಚಬೇಕು. ಅದು ಆದರೆ ಮಾತ್ರ ನಮಗೆ ಅನುಕೂಲ ಅಂತ ಭಾವಿಸಿದ್ದಾರೆ. ಒಳ ಮೀಸಲಾತಿ ಯಾವ ಆಧಾರದ ಮೇಲೆ ಮಾಡಿದ್ದೀರಿ. ಅದಕ್ಕೆ ಏನು ಸತ್ವ ಇದೆ. ಇದು ಮಾಡಿರೋದೆ ಹಿಂದೂ, ಮುಸ್ಲಿಂ ಸಂಘರ್ಷ ಮಾಡಿಸೋಕೆ. ಮುಂದಿನ ಚುನಾವಣೆಗೆ ಅನುಕೂಲ ಮಾಡುಕೊಳ್ಳಲು, ಮತ ಪಡೆಯಲು ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬಹಿಮತ ಬರುತ್ತೀವಿ ಅನ್ನೋ ವಿಚಾರವಾಗಿ ಪ್ರತಿಕ್ರಯಿಸಿ, ಕಾಂಗ್ರೆಸ್ 130, 140 ಅನ್ನೋದ್ರ ಕಟ್ ಹಾಕಿಸಿ ಆಫೀಸ್‍ನಲ್ಲಿ ಇಟ್ಟುಕೊಳ್ಳಲಿ. ಅವರು 75 ದಾಟಲ್ಲ. ಅವರ ಶಕ್ತಿ ನನಗೆ ಗೊತ್ತಿದೆ. ಹಲವಾರು ಭಾಗ್ಯ ಕೊಟ್ಟು ಕಳೆದ ಬಾರಿ ಎಲ್ಲಿಗೆ ಬಂದರೂ, ಮುಸ್ಲಿಮರು ಜೆಡಿಎಸ್‍ಗೆ ಮತ ಹಾಕಬೇಡಿ ಅಂದರು. ಅಷ್ಟೆಲ್ಲಾ ಮತ ಒಡೆದು 70ಸೀಟು ಪಡೆದರು. ಬಿಜೆಪಿಯಂತ ಕೆಟ್ಟ ಸರ್ಕಾರ ತಂದರು. ಈ ಕುಮಾರಸ್ವಾಮಿ ಏನು ಮಾಡಿದರು.
ಕುಮಾರಸ್ವಾಮಿ ವೆಸ್ಟೆಂಡ್ ಹೋಟೆಲ್‍ನಲ್ಲಿ ಇದ್ದರೂ ಅಂತಾರೆ, ನಿನ್ನೆ ಅಮಿತ್ ಶಾ ಕೂಡ ತಾಜ್ ವೆಸ್ಟ್ ಎಂಡ್‍ನಲ್ಲೇ ಅಲ್ವಾ ಸಭೆ ಮಾಡಿದ್ದು, ದಿನಕ್ಕೆ 10-15 ಸಭೆ ಮಾಡುತ್ತಿದ್ದೆ ನನಗೆ ಪ್ರಚಾರ ಸಿಗಲಿಲ್ಲವೆಂದರು.
ಎರಡಲ್ಲ, ಮೂರ ಕಡೆ ನಿಲ್ಲಲಿ: ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಯಿಸಿ, ಅವರು ಎರಡು, ಮೂರು ನಿಲ್ಲಲಿ. ಡಿ.ದೇವರಾಜ ಅರಸು ಬಳಿಕ ಐದು ವರ್ಷ ಅಧಿಕಾರ ಮಾಡಿದವರು. ಹಲವು ಭಾಗ್ಯ ನೀಡಿದವರು. ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳಲು ಆಗಲಿಲ್ಲ. ಹೀಗಾಗಿ ಅವರು ಎಷ್ಟು ಕ್ಷೇತ್ರದಲ್ಲಿ ಬೇಕಾದರೂ ನಿಲ್ಲಲಿ. ಅಂದು ಸಿದ್ದರಾಮಯ್ಯ ಹೋರಾಟದಿಂದ ಅಷ್ಟು ಸೀಟು ಬರಲಿಲ್ಲ. ನಾವೆಲ್ಲರೂ ಇದ್ದೆವು.
ಈಗ ನಾನು ಏಕಾಂಗಿ. ನನ್ನ ಏಕಾಂಗಿ ಹೋರಾಟದಲ್ಲಿ 40 ಸ್ಥಾನ ಗಳಿಸಿದ್ದೇನೆ. 94ರಲ್ಲಿ 70ಸ್ಥಾನ ನೀಡಿದ್ದಿರಿ, ಅದನ್ನೇ ರಿಪೀಟ್ ಮಾಡಿ ಅಂತ ಮನವಿ ಮಾಡುತ್ತೇನೆಂದರು.
ದೇವೇಗೌಡರದ್ದು ದೃತರಾಷ್ಟ್ರ ಪ್ರೇಮ ಅಂತಾರೆ, ಇದು ಯಾವ ಪ್ರೇಮ. ಇವತ್ತು ಅಪ್ಪ ಮಕ್ಕಳದ್ದೆಲ್ಲಾ ನಡೆಯುತ್ತಿದೆಯಲ್ಲ ಇದು ಯಾವ ಪ್ರೇಮ.? ದೇವೇಗೌಡರು, ನಾನು ಸೋತಿದ್ದೇನೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದಿದ್ದೆ. ಇದರ ಲಾಭ ಪಡೆಯುವುದು ಎಷ್ಟರ ಮಟ್ಟಿಗೆ ಸರಿ. ನಿನ್ನೆ ನಮ್ಮ ಕಾರ್ಯಕ್ರಮ ಯಶಸ್ವಿ ಆಗಲು ಕಾರ್ಯಕರ್ತರು ಕಾರಣ. ಯಾವ ರಾಷ್ಟ್ರೀಯ ಪಕ್ಷದಲ್ಲಿ ಈ ರೀತಿ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಶಕ್ತಿ, ಯಾವ ಪಕ್ಷದಲ್ಲಿ ಇಲ್ಲವೆಂದರು.
ಸಿದ್ದರಾಮಯ್ಯ ಮನೆಯವರು ಹೇಳಿದ್ದಕ್ಕೆ ವರುಣ ಬಂದೆ ಅನ್ನೋ ವಿಚಾರವಾಗಿ ಪ್ರತಿಕ್ರಯಿಸಿ, ಅವರ ಹೈಕಮಾಂಡ್ ಎಲ್ಲಿದೆ.? ಅವರ ಮನೆಯಲ್ಲಿ ಇದೆ ಅನ್ನೋದು ಗೊತ್ತಾಯ್ತಲ್ಲ. ನನ್ನ ಟಾರ್ಗೆಟ್ 123 ಸೀಟು ಗಳಿಸೋದು ಮಾತ್ರ. ನಾನು ನಿನ್ನೆ ಹೇಳಿದ್ದು 50ಸೀಟು ಸುಮ್ಮನ್ನಿದ್ದರೂ ಗೆಲ್ಲುತ್ತೇವೆ ಎನ್ನುವ ಅರ್ಥದಲ್ಲಿ, ಈಗ ಬಹುಮತಕ್ಕಾಗಿ ನಮ್ಮ ಶ್ರಮ ಹಾಕಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎನ್.ಮಂಜೇಗೌಡ, ಅಶ್ವಿನ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.