ಎರಡು ದಿನಗಳ ಹಿಂದೆ ಹೃದಯಾಘಾತ: ಆಂಜಿಯೋಪ್ಲಾಸ್ಟಿ : ಸುಶ್ಮಿತಾ ಸೇನ್

ಕೊಲ್ಕತ್ತಾ, ಮಾ. 2- ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು ‘ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ ತಿಳಿಸಿದ್ದಾರೆ.

ಸ್ಟೆಂಟ್ ಅಳವಡಿಕೆಯ ಸಮಯದಲ್ಲಿ ನಿಮಗೆ ದೊಡ್ಡ ಹೃದಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಹೃದಯಾಘಾತವಾದ ವಿಷಯವನ್ನು ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿರುವ ಸುಶ್ಮಿತಾ ಸೇನ್ ಅವರು,ಎರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಸಂಗತಿಯನ್ನು ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.

“ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇರಿಸಿಕೊಳ್ಳಿ, ಮತ್ತು ನಿಮಗೆ ಅಗತ್ಯವಿರುವಾಗ ಅಭಿಮಾನಿಗಳು ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಸುಶ್ಮಿತಾ ಸೇನ್ ತಿಳಿಸಿದ್ದಾರೆ.

ಒಂದೆರಡು ದಿನಗಳ ಹಿಂದೆ ಹೃದಯಾಘಾತದಿಂದ ಬಳಲುತ್ತಿದ್ದೆ… ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಲಾಗಿದೆ. ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞರು ‘ನನಗೆ ದೊಡ್ಡ ಹೃದಯವಿದೆ’ ಎಂದು ಮರುದೃಢಪಡಿಸಿದ್ದಾರೆ ಎಂದಿದ್ದಾರೆ.

ಸಾಕಷ್ಟು ಜನರು ತಮ್ಮ ಸಮಯೋಚಿತ ನೆರವು ಮತ್ತು ರಚನಾತ್ಮಕ ಕ್ರಮಕ್ಕಾಗಿ ಧನ್ಯವಾದ ಹೇಳುತ್ತಿದ್ದಾರೆ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ನನ್ನ ಹಿತೈಷಿಗಳು ಮತ್ತು ಪ್ರೀತಿಪಾತ್ರರಿಗೆ ಒಳ್ಳೆಯ ಸುದ್ದಿ ತಿಳಿಸಲು ಇಷ್ಟಪಡುತ್ತೇನೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದಿದ್ದಾರೆ.

ಶುಭ ಹಾರೈಕೆ:

ನಟಿಯ ಬಹುತೇಕ‌ ಅಭಿಮಾನಿಗಳು ಮತ್ತು ಅನುಯಾಯಿಗಳು ಶೀಘ್ರ ಚೇತರಿಸಿಕೊಳ್ಳಿ ಒಳ್ಳೆಯದಾಗಲಿ ಎಂದು ಸುಶ್ಮಿತಾ ಸೇನ್ ಅವರಿಗೆ ಹಾರೈಸಿದ್ದಾರೆ.