ಎರಡು ದಿನಗಳ ಲಾಕ್‍ಡೌನ್ ಸಡಿಲಿಕೆ ಅಗತ್ಯವಸ್ತು ಖರೀದಿಗೆ ಮುಂದಾದ ಸಾರ್ವಜನಿಕರು.

ಹೊಸಪೇಟೆ ಜೂ7: ಕರೋನಾ ನಾಗಾಲೋಟಕ್ಕೆ ಕಡಿವಾಣ ಹಾಕಲೇಂದೆ ಜಾರಿಗೆ ತಂದಿರುವ ಲಾಕ್‍ಡೌನ್ ಅಂತು ಫಲಪ್ರದವಾಗಿದೆ ಇಂದು ಕೊನೆಯಾಗಬೇಕಾಗಿದ್ದು ಲಾಕ್‍ಡೌನ್ ಮತ್ತಷ್ಟು ಕಡಿಮೆ ಮಾಡಲು ಜೂ14ರವರೆಗೂ ಮುಂದುವರೆದ ಪರಿಣಾಮ ಮಧ್ಯ ಎರಡು ದಿನ ಅಗತ್ಯವಸ್ತು ಖರೀದಿಗೆ ಅವಕಾಶ ನೀಡಿದ್ದು ಸಾರ್ವಜನಿಕರು ಖರೀದಿ ಭರಟೆಯಲ್ಲಿದ್ದರು.
ನಿತ್ಯವೂ ನೂರರ ಗಡಿ ದಾಟುತ್ತಲೇ ಇದ್ದ ಸೋಂಕಿತ ಸಂಖ್ಯೆ ಕಳೆದ ಮೂರನಾಲ್ಕುದಿನಗಳಿಂದ ಎರಡಂಕಿಗೆ ಬಂದಿದ್ದು ಚಿಕಿತ್ಸೆ ಫಲಕಾರಿಯಾಗಿ ಮನೆಗೆ ಬರುತ್ತಿರುವವರ ಸಂಖೆ ವೃದ್ದಿಯಾಗುತ್ತಿದ್ದು. ಅವಳಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದ್ದು ಜೂನ್ 14ರ ವರೆಗೂ ಇರುವ ಲಾಕ್‍ಡೌನ್ ಮಧ್ಯ ಎರಡು ದಿನ ಖರೀದಿಗೆ ನೀಡಿದ ಅವಕಾಶದ ಹಿನ್ನೆಲೆಯಲ್ಲಿ ಮೊದಲ ದಿನದ ಖರೀದಿಗೆ ಜನ ಮುಗಿಬೀಳುವಂತಾಗಿತು.
ನಿರಾಳವಾಗಿದ್ದ ಪೊಲೀಸರು
ನಿತ್ಯವೂ ಒಂದಲ್ಲಾ ಒಂದು ಹಂತದಲ್ಲಿ ಸಂಚಾರ ಮಾಡುವ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ ಪೊಲೀಸರು ಇಂದು ನಿರಾಳವಾಗಿ ಜನ ಸಂಚಾರಕ್ಕೆ ಬಿಟ್ಟಿದ್ದು ಕೇವಲ ವಾಹನ ನಿಲುಗಡೆ, ಏಕಮುಖ ಸಂಚಾರ ಸೇರಿದಂತೆ ಮೇಲ್ನೋಟಕ್ಕೆ ನಿಯಂತ್ರಣ ಮಾಡುತ್ತಿರುವುದು ಕಂಡು ಬಂತು.

ಹೊರಬರುತ್ತಿದ್ದಂತೆಯೆ ಜನ ನಿರ್ಲಕ್ಷ್ಯ ಮಾತ್ರ ಕಂಡುಬಂದಿದ್ದು ವಿಪರ್ಯಾಸ, ಪೊಲೀಸರ ದಂಡ ತಪ್ಪಿಸಿಕೊಳ್ಳಲು ಮಾತ್ರ ಮಾಸ್ಕ್ ಧರಿಸುತ್ತಿದ್ದ ಜನತೆ ಪೊಲೀಸರು ಕಾಣುತ್ತಲೇ ಮೇಲೆರಿಸುವುದು ಸಾಮಾನ್ಯವಾಗಿತು. ಸದಾ ನಗರದ ವಿವಿಧ ವೃತ್ತಗಳಲ್ಲಿ ಸಂಚಾರ ನಿರ್ಭಂದಕ್ಕೆ ಲಾಟಿ ಹಿಡಿದು ನಿಲ್ಲುತ್ತಿದ್ದ ದುರ್ಗಾಪಡೆಯ ಮಹಿಳಾ ಸಿಬ್ಬಂದಿಗಳು ಸಹ ತಮ್ಮ ಮನೆಗೆ ಬೇಕಾಗುವ ತರಕಾರಿ ಖರೀದಿ ಮಾಡಿ ಮುನ್ಸಿಪಾಲ್ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂತು.