ಎರಡು ದಿನಗಳ ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ

ಮೈಸೂರು:ಮಾ:30: ವಿಶ್ವವಿದ್ಯಾನಿಲಯ, ಸೆಂಟರ್ ಫಾರ್ ಕೆನಡಿಯನ್ ಸ್ಟಡೀಸ್ ಇಂಗ್ಲಿಷ್ ವಿಭಾಗ ಹಾಗೂ ಸೆಂಟರ್ ಫಾರ್ ಗಾಂಧಿಯನ್ ಸ್ಟಡೀಸ್ ಸಹಯೋಗದಲ್ಲಿ `ಬದಲಾಗುತ್ತಿರುವ ಜಗತ್ತಿನಲ್ಲಿ ಗಾಂಧಿ ಮತ್ತು ಅವರ ಆಲೋಚನೆಗಳು’ ಕುರಿತು ಎರಡು ದಿನಗಳ ಕಾಲ ರಾಷ್ಟ್ರೀಯ ವೆಬಿನಾರ್ ಆಯೋಜನೆ ಮಾಡಲಾಗಿದೆ.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಈ ವೆಬಿನಾರ್ ಆಯೋಜನೆ ಮಾಡಲಾಗಿದ್ದು, ಇಂದು ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಅವರು ವರ್ಚುವಲ್ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಇದೇ ವೇಳೆ ಗಣ್ಯರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವೆಬಿನಾರ್ ಗೆ ಚಾಲನೆ ನೀಡಿದರು.
ಎರಡು ದಿನಗಳ ಕಾಲ ನಡೆಯುವ ರಾಷ್ಟ್ರೀಯ ವೆಬಿನಾರ್ ನಲ್ಲಿ ಗಾಂಧೀಜಿ ವಿಚಾರ ಕುರಿತಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಗಾಂಧಿ ಭವನ ನಿರ್ದೇಶಕ ಪೆÇ್ರ. ಎಂ. ಎಸ್. ಶೇಖರ್, ಪೆÇ್ರ. ವಿಜಯ್ ಶೇಷಾದ್ರಿ, ಪೆÇ್ರ. ಜಿ. ಬಿ. ಶಿವರಾಜು, ಪೆÇ್ರ. ಎಲ್. ದೇವಿಕಾ ರಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.