ಎರಡು ದಶಕಗಳ ಬಳಿಕ ಅರಸೀಕೆರೆ ದೊಡ್ಡ ಕೆರೆ ಭರ್ತಿ

ಹರಪನಹಳ್ಳಿ.ಸೆ.12: ತಾಲೂಕಿನ ಅರಸೀಕೆರೆ ಗ್ರಾಮದ ದೊಡ್ಡ ಕೆರೆ ಎರಡು ದಶಕಗಳ ಬಳಿಕ ಭರ್ತಿಯಾಗಿದ್ದು ಅರಸೀಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ದೊಡ್ಡಕೆರೆ ಭರ್ತಿ ಯಾಗಿದ್ದು ಅಂತರ್ಜಲ ಮಟ್ಟ ಹೆಚ್ಚಾಗಿ ಸುಮಾರು ವರ್ಷಗಳಿಂದ ರೈತರ ಹೊಲಗಳಲ್ಲಿ ನೀರು ಕಾಣದ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿವೆ ಎನ್ನಲಾಗುತ್ತಿದೆ.ಈ ಕೆರೆ ಭರ್ತಿಯಿಂದಾಗಿ ಕರೆಗುಡಿಹಳ್ಳಿ, ಚಿಕ್ಕಕಬ್ಬಳ್ಳಿ, ಹೊಸಕೋಟೆ, ಬೂದಿಹಾಳು, ಮಾದಿಹಳ್ಳಿ, ಬಸವನಕೋಟೆ, ಕಸವನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಅನುಕೂಲ ವಾಗಲಿದೆ ಎಂದು ಅರಸೀಕೆರೆ ಗ್ರಾಮದ ಹಾದಿಮನಿ ನಾಗರಾಜ್ ತಿಳಿಸಿದ್ದಾರೆ.ಹೀಗೆ ಸತತವಾಗಿ ಮಳೆ ಮುಂದುವರೆದರೆ ಕೆರೆ ಕೋಡಿ ಬೀಳುತ್ತದೆ ಎನ್ನಲಾಗುತ್ತಿದ್ದು ತಾಲ್ಲೂಕು ಆಡಳಿತ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು.

Attachments area