ಎರಡು ಗಂಟೆಯ ಅವಧಿಯ ದೇಶೀಯ ವಿಮಾನದಲ್ಲಿ‌ ಊಟಕ್ಕೆ‌‌ ಕತ್ತರಿ

ನವದೆಹಲಿ, ಏ.12- ದೇಶದಲ್ಲಿ ಕೊರೋನಾ ಸೋಂಕು ಪ್ರಕರಣ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ವಿಮಾನದಲ್ಲಿ ಇನ್ನು ಮುಂದೆ ಊಟ ನೀಡುವುದಕ್ಕೆ ಬ್ರೇಕ್ ಹಾಕಲಾಗಿದೆ.

ದೇಶೀಯ ವಿಮಾನ ಸಂಚಾರದ‌‌ ಎರಡು ಗಂಟೆಯ ಅವಧಿಯ ವಿಮಾನ ಸಂಚಾರದಲ್ಲಿ ಊಟ ನೀಡದೇ ಇರಲು ನಾಗರಿಕ‌ ವಿಮಾನಯಾನ ಸಚಿವಾಲಯ ನಿರ್ಧಾರ ಕೈಗೊಂಡಿದೆ.

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಮಿತಿಮೀರಿ ಸಾಗುತ್ತಿದೆ.ಜೊತೆಗೆ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡು ಭಾರತ ಮೊದಲ ಸ್ಥಾನದತ್ತ ಸಾಗುತ್ತಿದೆ.

ಈ ಎಲ್ಲಾ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಕಡಿಮೆ ಅವಧಿಯಲ್ಲಿ ಸಂಚರಿಸುವ ದೇಶೀಯ ವಿಮಾನದ ಪ್ರಯಾಣಿಕರಿಗೆ ಊಟ ನೀಡಿಕೆಗೆ ಕತ್ತರಿ ಹಾಕಿದೆ.

ಹೊಸ‌ ನಿಮಯ ಬಿಡುಗಡೆ;

ದೇಶದ ಯಾವದೇ ಭಾಗಕ್ಕೆಎರಡು ಗಂಟೆಯ ಒಳಗೆ ಸಂಚಾರ ಮಾಡುವ‌ ವಿಮಾನದಲ್ಲಿ ಪ್ರಯಾಣಿಕರಿಗೆ ಊಟ‌ ,ತಿಂಡಿ ನೀಡುವುದನ್ನು ಸ್ಥಗಿತ ಗೊಳಿಸಿ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮ‌‌ ಪ್ರಕಟಿಸಿದೆ.

ಎರಡು ಗಂಟೆಗೂ ಅಧಿಕ ಪ್ರಯಾಣದ ಸಮಯದ ಪ್ರಯಾಣಿಕರಿಗೆ ವಿಮಾನದಲ್ಲಿ ಮೊದಲ ಪ್ಯಾಕ್ ಮಾಡಲಾದ ಆಹಾರ ವನ್ನು ಬಳಸಿ ಬಿಸಾಡಬಹುದಾಗ ಪ್ಲೇಟ್ ಗಳಲ್ಲಿ ನೀಡಬೇಕು ಎಂದು ಸೂಚನೆ ನೀಡಿದೆ.

ಊಟ, ತಿಂಡಿ,‌ಪಾನೀಯ ನೀಡುವ ಸಮಯದಲ್ಲಿ ಪ್ರತಿಯೊಬ್ಬ ಸಿಬ್ಬಂದಿ ಹೊಸದಾಗಿ ಕೈಗವಸು ಧರಿಸಬೇಕು.ಸುರಕ್ಷತೆಗೆ ಆದ್ಯತೆ ‌ನೀಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಸೋಂಕು ಇತ್ತೀಚಿಗೆ ಹೆಚ್ಚು ಸೋಂಕು ಪ್ರಕರ ದೃಢಪಡುತ್ತಿವೆ.