ಎರಡು ಕ್ಷೇತ್ರದಲ್ಲಿ ಸೋಲ್ತಾರೆ ಅಂತಾ ಮೊದಲೆ ಹೇಳಿದ್ದೆ: ಪುಟ್ಟರಂಗಶೆಟ್ಟಿ

ಚಾಮರಾಜನಗರ, ಮೇ.14:- ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋಲ್ತಾರೆ ಎಂದು ಮೊದಲೆ ಹೇಳಿದ್ದೇ, ಅದರಂತೆ ಸೋತಿದ್ದಾರೆ ಎಂದು ಚಾಮರಾಜನಗರದಲ್ಲಿ ಗೆಲುವು ಸಾಧಿಸಿದ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.
ಮತ ಎಣಿಕೆ ಕೇಂದ್ರದಲ್ಲಿ ಅವರು ಮಾತನಾಡಿ, 15 ಸಾವಿರ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಕೊಂಡಿದ್ದೆ, ಸೋಮಣ್ಣ ಸೋತಿದ್ದಾರೆ ಇನ್ನು ಬೆಂಗಳೂರಿಗೆ ಹೋಗಬೇಕμÉ್ಟೀ, ಹಣ ಹೆಚ್ಚೋ- ಮಾಡಿದ ಕೆಲಸ ಹೆಚ್ಚೋ ಎಂಬುದನ್ನು ಜನರು ನಿರ್ಧರಿಸಿದ್ದು ನಾನು ಮಾಡಿದಅಭಿವೃದ್ಧಿ ನೋಡಿ ಆಶೀರ್ವಾದ ಮಾಡಿದ್ದಾರೆಎಂದು ಹೇಳಿದರು.
ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಲಿದೆ, ನಾನು ಸಚಿವ ಆಗಬೇಕೆ ಬೇಡವೇ ಎಂಬುದು ಕೂಡ ಪಕ್ಷದ ನಾಯಕರಿಗೆ ಬಿಟ್ಟ ತೀರ್ಮಾನವಾಗಿದೆ, ಇಂದು ಸಂಜೆ ಬೆಂಗಳೂರಿಗೆ ಹೋಗುತ್ತಿದ್ದೇನೆ, ಈ ಗೆಲುವಿನಲ್ಲಿ ನನಗೆ ಹೊಸತನ ಏನಿಲ್ಲ, ಮೊದಲ ಬಾರಿಯಿಂದಲೂಗೆದ್ದು ಬರುತ್ತಿದ್ದೇನೆ ಎಂದು ಹೇಳಿದರು.
4ನೇ ಬಾರಿಗೆದ್ದ ಪುಟ್ಟರಂಗಶೆಟ್ಟಿ:
ಈ ಬಾರಿ ಸೋಮಣ್ಣ ಚಾಮರಾಜನಗರದಲ್ಲಿ ಗೆದ್ದೇ ಬಿಡುತ್ತಾರೆ ಎಂಬ ಕಮಲ ಕಲಿಗಳ ಅತ್ಯುತ್ಸಾಹಕ್ಕೆ ಮತದಾರತಣ್ಣೀರು ಎರಚಿದ್ದು ಸತತ ನಾಲ್ಕನೇ ಬಾರಿಗೆ ಚಾಮರಾಜನಗರದ ಗದ್ದುಗೆ ಏರಿದ್ದಾರೆ ಶಾಸಕ ಸಿ.ಪುಟ್ಟರಂಗಶೆಟ್ಟಿ. ಶಾಸಕ ಸಿ.ಪುಟ್ಟರಂಗಶೆಟ್ಟಿ ಕೃಷಿಯಲ್ಲಿಅಪರಿಮಿತ ಆಸಕ್ತಿ ಇರುವ ಜನಪ್ರತಿನಿಧಿಯಾಗಿದ್ದು ತೆಂಗಿನ ಮರವನ್ನು ಸರಸರನೇ ಏರುವ ನಿμÁ್ಣತ. ಆ ಕಲೆಯನ್ನೇರಾಜಕೀಯದಲ್ಲಿಕರಗತ ಮಾಡಿಕೊಂಡಿರುವುದು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಲಿಂಗಾಯತ ಪ್ರಾಬಲ್ಯ ಕ್ಷೇತ್ರವಾದ ಚಾಮರಾಜನಗರದಲ್ಲಿ ಲಿಂಗಾಯತ ಪ್ರಬಲ ನಾಯಕ ವಿ.ಸೋಮಣ್ಣ ಸ್ಪರ್ಧೆ ಮಾಡಿದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದು ತಾನು ಸೋಲಿಲ್ಲದ ಸರದಾರಎಂದು ತೋರಿಸಿದ್ದಾರೆ.
ಸೋಮಣ್ಣ ಬಂದ ಬಳಿಕ ಚಾಮರಾಜನಗರ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿತ್ತು, ಸೋಮಣ್ಣ ಚಾಮರಾಜನಗರ ಮತದಾರರಾಗಿ ಬದಲಾಗಿದ್ದರು. ಆದರೆ, ಎಲ್ಲದಕ್ಕೂ ಮತದಾರ ಮತಯಂತ್ರದಮೂಲಕ ತೀರ್ಪು ನೀಡಿರುವುದು ಅಚ್ಚರಿಯಾಗಿದೆ.
ಬಿಜೆಪಿ 40% ನನ್ನ ಗೆಲುವಿಗೆ ಕಾರಣ:
ಗಣೇಶ್ ಪ್ರಸಾದ್ ನನ್ನ ತಂದೆ ಮಹಾದೇವಪ್ರಸಾದ್ ಮಾಡಿಸ ಸಾಧನೆ, ಅಭಿವೃದ್ಧಿ ಹಾಗೂ ಬಿಜೆಪಿ ಶಾಸಕರ 40% ಭ್ರμÁ್ಟಚಾರ ನನ್ನ ಗೆಲುವಿಗೆ ಕಾರಣಎಂದುಗುಂಡ್ಲುಪೇಟೆಕ್ಷೇತ್ರದ ವಿಜೇತಕಾಂಗ್ರೆಸ್‍ಅಭ್ಯರ್ಥಿಗಣೇಶ್ ಪ್ರಸಾದ್ ಹೇಳಿದರು.
ನನ್ನ ಗೆಲುವು ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ, ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆತರಬೇಕೆಂದು ನಮ್ಮ ಮುಖಂಡರು, ಕಾರ್ಯಕರ್ತರು ದುಡಿದಿದ್ದಾರೆ, ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.
ಮಹಾದೇವಪ್ರಸಾದ್ ಅವರು ಮಾಡಿದ್ದ ಅಭಿವೃದ್ಧಿ ನೆನಪಿಗೆ ಜನರು ಮತ ಹಾಕಿದ್ದು ಜನರ ಅಪೇಕ್ಷೆಯಂತೆ ಗೆದ್ದಿದ್ದೇನೆ, ನನಗೂ ಕರೆ ಬಂದಿತ್ತು, ಇಂದು ಬೆಂಗಳೂರಿಗೆ ತೆರಳುತ್ತೇನೆ ಎಂದರು.
1 ಮತದಿಂದ ಸೋತ ನನಗೆ ಅಂತರ ಮುಖ್ಯವಲ್ಲ- ಗೆಲುವು ಮುಖ್ಯ: 1 ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿಎ.ಆರ್.ಕೃಷ್ಣಮೂರ್ತಿ ಹೇಳಿದರು. 1 ಮತದ ಅಂತರದಿಂದ ಸೋತಿದ್ದೆಆದರೀಗ 50 ಸಾವಿರಕ್ಕೂಅಧಿಕ ಮತಗಳ ಅಂತರದಿಂದ ಗೆದ್ದಿದ್ದೇನೆ, ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳು, ನನ್ನ ಮೇಲಿದ್ದಜನರ ವಿಶ್ವಾಸ, ಪಕ್ಷದ ಸಂಘಟನೆಯಿಂದ ಈ ಬಾರಿಗೆದ್ದಿದ್ದೇನೆ , ನನ್ನ ಗೆಲುವು ಜನರಗೆಲುವಾಗಿದೆ , ತಂದೆ ರಾಚಯ್ಯ ಅವರ ಸಮಾಧಿಗೆ ತೆರಳಿ ನಮಿಸಿ ಬಳಿಕ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲಕ್ಕೆ ಭೇಟಿಕೊಟ್ಟು ಬೆಂಗಳೂರಿಗೆ ತೆರಳುತ್ತೇನೆ ಎಂದು ತಿಳಿಸಿದರು.
ಮತದಾರರನ್ನು ಸೆಳೆಯದ ಸ್ಟಾರ್ ಪ್ರಚಾರ:
ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರವಾದಜನ ಸಂಕಲ್ಪ ಯಾತ್ರೆಯೂ ರಾಜ್ಯದಲ್ಲಿ ಹನೂರುತಾಲೂಕಿನಿಂದಲೇ ಆರಂಭಗೊಂಡಿತ್ತು. ಜೆ.ಪಿ.ನಡ್ಡಾ, ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಸುದೀಪ್ ಹನೂರಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.
ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ, ಡಿಕೆಶಿ ಬಂದಿದ್ದರೇ ಚುನಾವಣೆ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಮಹಿಳೆಯರ ಬೃಹತ್ ಸಮಾವೇಶ ನಡೆಸಿದ್ದರು. ಬಹಿರಂಗ ಪ್ರಚಾರಕ್ಕೆಎರಡು ದಿನ ಬಾಕಿ ಇರುವಾಗವμÉ್ಟೀ ಎಚ್ಡಿಕೆ ಅರ್ಧ ತಾಸು ರೋಡ್ ಶೋ ಮಾಡಿದ್ದರು. ಮತದಾರ ಕೊನೆಗೂ ಜೆಡಿಎಸ್ ಬೆಂಬಲಿಸಿ ಮಂನುನಾಥ್ ಗೆಲ್ಲಿಸುವ ಮೂಲಕ ದಶಕಗಳಿಂದ ಅಧಿಕಾರಕ್ಕಾಗಿಜಿದ್ದಾಜಿದ್ದಿ ನಡೆಸಿದ್ದ ಎರಡು ಕುಟುಂಬಗಳು ಈ ಬಾರಿಅಧಿಕಾರ ಕಳೆದುಕೊಂಡಿದೆ.