ಎರಡು ಕೋಟಿ ಪರಿಹಾರ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ

ಮುಂಬೈ,ಸೆ.15-ಬಾಂದ್ರಾದಲ್ಲಿರುವ ಮನೆ ಹಾಗು ಕಟ್ಟಡದ ಕೆಲ ಭಾಗ ದ್ವಂಸ ಮಾಡಿದ‌ ಪರಿಹಾರವಾಗಿ 2 ಕೋಟಿ ರೂಪಾಯಿ ನೀಡಬೇಕು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನಟಿ ಕಂಗನಾ ರಣಾವತ್ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಇದೇ 9 ರಂದು ಅಕ್ರಮದ ಭಾಗ ಹೊಡೆದು ಹಾಕಲು ಮುಂದಾಗಿತ್ತು. ಇದನ್ನು ವಿರೋಧಿಸಿ ಬಾಂಬೆ ಹೈಕೋರ್ಟ್ ನಿಂದ ನಟಿ ಕಂಗನಾ ತಡೆಯಾಜ್ಞೆ ತಂದಿದ್ದರು.

ಅಕ್ರಮವಾಗಿ ಮಹಾನಗರ ಪಾಲಿಕೆ ತಮ್ಮ ಕಚೇರಿ ಮತ್ತು ನಿವಾಸದ ಕೆಲ ಭಾಗ ಹೊಡೆದು ಹಾಕಿದ್ದು 2 ಕೋಟಿ ಪರಿಹಾರ ಕಟ್ಟಿಕೊಡುವಂತೆ ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಬಾಲಿವುಡ್ ನಟ ಸುಶಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನಟಿ ಕಂಗನಾ ರಣಾವತ್ ,ಇದರ ಹಿಂದೆ ಮಾದಕವಸ್ತು ಜಾಲ ಇದೆ ಎಂದು ಆರೋಪಿಸಿದ್ದರು .ಅಷ್ಟಕ್ಕೆ ಸುಮ್ಮನಾಗದ ಅವರು ಮುಂಬೈ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಇದ್ದಂತೆ.ಇಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಎಂದು ದೂರಿದ್ದರು.

ನಟಿ ಕಂಗನಾ ಆರೋಪ, ಆಡಳಿತರೂಢ ಶಿವಸೇನೆ ಮುಖಂಡರನ್ನು ಕೆರಳಿಸುವಂತೆ ಮಾಡಿತ್ತು. ಅಲಗಲದೆ ಆರೋಪ-ಪ್ರತ್ಯಾರೋಪ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಂಗನಾ ಅವರಿಗೆ ವೈ ಫ್ಲಸ್ ಭದ್ರತೆ ನೀಡಿತ್ತು.

ಈ ಎಲ್ಲಾ ಬೆಳವಣಿಗೆಯ ನಡುವೆ ಮಹಾರಾಷ್ಟ್ರ ಸರ್ಕಾರದ ವಾಗ್ದಾಳಿ ಮುಂದುವರಿಸಿದ್ದ ನಟಿ ಕಂಗನಾ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಡಿ ಮಾಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು.