ಎರಡು ಅಂಗನವಾಡಿ ನೂತನ ಕಟ್ಟಡ ಕಾಮಗಾರಿಗೆ ಚಾಲನೆ

ಕಲಬುರಗಿ:ಜು.26: ಹೀರಾಪೂರನಲ್ಲಿ ಎರಡು ಅಂಗನವಾಡಿ ನೂತನ ಕಟ್ಟಡ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಅಲಿಮೋದ್ದೀನ ಪಟೇಲ, ಕಾರ್ಯ ನಿರ್ವಾಹಕ ಅಭಿಯಂತರರಾದ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಚಾರಕಿ ಶಿವಲೀಲಾ ಬಿ ಕಡಗಂಚಿ, ಬಡಾವಣೆ ಹಿರಿಯರಾದ ಶಿವಯೋಗಿ ದೊಡಮನಿ, ನಾಗೀಂದ್ರಪ್ಪ ನಾಡಗಿರಿ, ಸುನೀಲ ಇನಾಮದಾರ, ಪರಮೇಶ್ವರ ಮೇಲ್ಮನಿ, ಶಂಕರ ನಿಕ್ಷಿ, ಅಣ್ಣಾರಾಯ ಹತ್ತರಗಿ, ಚಿದಾನಂದ ತೆಲ್ಲೂರ, ಅಶೋಕ ಸರಡಿಗಿ, ಲಕ್ಷ್ಮಣ ಹತ್ತರಗಿ, ಸಂತೋಷ ಮೇಲ್ಮನಿ, ಬಸವರಾಜ ಬಿರಾದರ, ಅಲ್ಲಪ್ರಭು ನಿಂಬರ್ಗಾ, ಶರಡಗೌಡ ಬಿರಾದರ, ಸುನೀಲ ದಿಗ್ಸಂಗಿ, ಶಿವಕುಮಾರ ಚಿಂಚೋಳಿ, ಅನೀಲ ಬಿರಾದರ, ಭೀಮಾ ದುದನಿ, ಗಂಗಾಧರ ವಾಡಿ, ಚಾಂದಪಾಶಾ ಕರಡಿ, ಸೆಕ್ಷನ ಇಂಜನೀಯರ ವಿನೋದಮಾರ, ಅಂಗನವಾಡಿ ಕಾರ್ಯಕರ್ತೆ ಗೀತಾಬಾಯಿ ಮದ್ರಿ, ಗುತ್ತಿಗೇದಾರರಾದ ಜಯಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.