ಎರಡುನೂರು ಕುಟುಂಬಗಳಿಗೆ ಪಡಿತರ ವಿತರಣೆ

ದೇವದುರ್ಗ.ಮೇ.೨೯-ಕರೊನಾ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದ ಬಡವರಿಗೆ ಬಿಜೆಪಿ ರೈತ ಮೋರ್ಚಾದ ತಾಲೂಕು ಅಧ್ಯಕ್ಷ ಸಂಜೀವ್ ರೆಡ್ಡಿ ಸಾಹುಕಾರ ನೆರವಾಗಿದ್ದಾರೆ.
ತಾಲೂಕಿನ ಜಾಲಹಳ್ಳಿ ಪಟ್ಟಣ ಸೇರಿ ವಿವಿಧ ಗ್ರಾಮದ ಸುಮಾರು ಎರಡುನೂರು ಬಡಕುಟುಂಬಗಳಿಗೆ ಶುಕ್ರವಾರ ಆಹಾರಧಾನ್ಯ ಒಳಗೊಂಡ ಕಿಟ್ ವಿತರಣೆ ಮಾಡಿದರು. ಆಹಾರದ ಕಿಟ್ ನಲ್ಲಿ ೫ ಕೆಜಿ ಅಕ್ಕಿ, ತಲಾ ೧ ಕೆಜಿ ಬೇಳೆ, ಸಕ್ಕರೆ, ಗೋಧಿ ಹಿಟ್ಟು, ಅಡುಗೆ ಎಣ್ಣೆ ಸೇರಿ ಉಳಿದ ಮಸಾಲೆ ಪದಾರ್ಥಗಳು ಒಳಗೊಂಡಿವೆ. ವೈಯಕ್ತಿಕವಾಗಿ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ವಿವಿಧ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮ ವರದಿಗಾರರು ಹಾಗೂ ಏಜೆಂಟರಿಗೆ ಶನಿವಾರ ಆಹಾರ ಧಾನ್ಯ ವಿತರಣೆ ಮಾಡಲು ಸಂಜೀವರೆಡ್ಡಿ ಸಾಹುಕಾರ ಮುಂದಾಗಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರ ಲಾಕ್ಡೌನ್ ಗೋಷಣೆ ಮಾಡಿದ ಸಂದರ್ಭದಲ್ಲಿ ನೂರಾರು ಕುಟುಂಬಗಳಿಗೆ ಆಹಾರ ಧಾನ್ಯ ನೀಡಿದ್ದರು. ಅದಲ್ಲದೆ ೨೦೧೯ರಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಹಲವು ಕುಟುಂಬಗಳಿಗೆ ಆಹಾರಧಾನ್ಯ ನೀಡಿ, ಗಮನಸೆಳೆದಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚ ತಾಲೂಕು ಅಧ್ಯಕ್ಷ ಸಂಜೀವ ರೆಡ್ಡಿ ಸಾಹುಕಾರ್, ಮುಖಂಡರಾದ ಬಸವರಾಜ ಪಾಟೀಲ್ ವಕೀಲ ಗಾಣಧಾಳ, ರಂಗನಾಥ್, ಸುರೇಶಗೌಡ ಕಕ್ಕಲದೊಡ್ಡಿ, ರಂಗನಾಥ್ ಮಕಾಶಿ ಇತರರಿದ್ದರು.