ಎರಡನೇ ಹಂತದಗ್ರಾ.ಪಂ. ಚುನಾವಣೆ1112 ಸ್ಥಾನಗಳಿಗೆ ಮತದಾನ

ದಾವಣಗೆರೆ .ಡಿ26: ಜಿಲ್ಲೆಯಲ್ಲಿ ಭಾನುವಾರ 2ನೇ ಹಂತದ ಗ್ರಾ.ಪಂ.ಚುನಾವಣೆ ನಡೆಯಲಿದ್ದು ಒಟ್ಟು 1112 ಗ್ರಾಂ.ಪಂ. ಸ್ಥಾನಗಳಿಗೆ ಮತದಾನ ನಡೆಯಲಿದೆ.
ಹರಿಹರ, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕುಗಳ 101 ಗ್ರಾಮ ಪಂಚಾಯಿತಿ ಗಳ 586 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು ಹರಿಹರ ತಾಲ್ಲೂಕಿನ23 ಗ್ರಾಮ ಪಂಚಾಯಿತಿಗಳ 151 ಮತಗಟ್ಟೆಗಳು,ಚನ್ನಗಿರಿ ತಾಲೂಕಿನ 61 ಗ್ರಾಮ ಪಂಚಾಯಿತಿಗಳ 342 ಮತಗಟ್ಟೆಗಳಲ್ಲಿ ಹಾಗೂ ನ್ಯಾಮತಿ ತಾಲೂಕಿನ 17 ಗ್ರಾಮ ಪಂಚಾಯಿತಿಗಳ 93 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಚನ್ನಗಿರಿ ತಾಲೂಕುನಲ್ಲಿ 229616 ಮತದಾರರು,ಹರಿಹರ ತಾಲ್ಲೂಕಿನಲ್ಲಿ 100629 ಮತದಾರರು ಮತ್ತು ನ್ಯಾಮತಿ ತಾಲೂಕಿನ 59704 ಮತದಾರರು ಸೇರಿದಂತೆ ಒಟ್ಟಾರೆ 390012 ಮತದಾರರಿದ್ದಾರೆ.
ಮತಗಟ್ಟೆಗಳು- ಚನ್ನಗಿರಿ ತಾಲೂಕಿನಲ್ಲಿ 45 ಸೂಕ್ಷ್ಮ 47 ಅತಿ ಸೂಕ್ಷ್ಮ, ಹಾಗೂ 267 ಸಾಮಾನ್ಯ ಮತಗಟ್ಟೆಗಳು,ಹರಿಹರ ತಾಲ್ಲೂಕಿನಲ್ಲಿ 17 ಸೂಕ್ಷ್ಮ 17 ಅತಿ ಸೂಕ್ಷ್ಮ ಹಾಗೂ 133 ಸಾಮಾನ್ಯ ಮತಗಟ್ಟೆಗಳು ನ್ಯಾಮತಿ ತಾಲ್ಲೂಕಿನಲ್ಲಿ 11 ಸೂಕ್ಷ್ಮ 15 ಅತಿ ಸೂಕ್ಷ್ಮ ಮತ್ತು 71ಸಾಮಾನ್ಯ ಮತಗಟ್ಟೆಗಳಿದ್ದು ಒಟ್ಟಾರೆ 480 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ
ಅವಿರೋಧ ಆಯ್ಕೆ – ಹರಿಹರ 55,ಚನ್ನಗಿರಿ 94,ನ್ಯಾಮತಿಯ 15 ಸ್ಥಾನ ಸೇರಿದಂತೆ 164 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಮೂರು ತಾಲೂಕುಗಳು 6 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಗಳು
ನ್ಯಾಮತಿ -ಕರ್ನಾಟಕ ಪಬ್ಲಿಕ್ ಸ್ಕೂಲ್ ,ಶಿವಾನಂದಪ್ಪ ಬಡಾವಣೆ ರಸ್ತೆ
ಹರಿಹರ- ಸೆಂಟ್ ಮೇರಿಸ್ ಕಾನ್ವಂಟ್ ಶಾಲೆ,ಹರಪನಹಳ್ಳಿ ರಸ್ತೆ
ಚನ್ನಗಿರಿ- ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.