ಎರಡನೇ ಸಿಡಿಮದ್ದು ತಾಲೀಮಿಗೆ 5 ಆನೆಗಳು ಗೈರು

ಸಂಜೆವಾಣಿ ನ್ಯೂಸ್
ಮೈಸೂರು, ಅ.14:- ಇದೇ ಮೊದಲ ಬಾರಿಗೆ ಆರು ಆನೆಗಳ ಗೈರಿನೊಂದಿಗೆ ಎರಡನೇ ಸಿಡಿಮದ್ದು ತಾಲೀಮು ಯಶಸ್ವಿಯಾಯಿತು.
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಜಂಬೂ ಸವಾರಿ ಪೂರ್ವಭಾವಿಯಾಗಿ ಎರಡನೇ ಹಂತದ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು. ಈ ವೇಳೆ ಮೊದಲ ಗಜಪಡೆಯ ತಂಡದ ಸದಸ್ಯರಾದ ಅಭಿಮನ್ಯು, ವರಲಕ್ಷ್ಮಿ, ವಿಜಯ, ಧನಂಜಯ, ಮಹೇಂದ್ರ, ಗೋಪಿ, ಭೀಮ, ಕಂಜನ್, ಅರ್ಜುನ ಆನೆಗಳು ಮಾತ್ರ ಪಾಲ್ಗೊಂಡಿದ್ದವು. ಉಳಿದಂತೆ ಎರಡನೇ ಹಂತದಲ್ಲಿ ಆಗಮಿಸಿದ ಹಿರಣ್ಯ, ಲಕ್ಷ್ಮಿ, ಪ್ರಶಾಂತ, ಸುಗ್ರೀವ ಹಾಗೂ ರೋಹಿತ್ ಆನೆಗಳು ಗೈರಾಗಿದ್ದವು. ಬಹುತೇಕ ಹೊಸ ಆನೆಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ಉಳಿದ ಅನುಭವಿ ಆನೆಗಳು ಸಿಡಿಮದ್ದಿಗೆ ಹೆದರಲಿಲ್ಲ.
ಹೊರಟೆ ಹೋದ ಎರಡು ಅಶ್ವಗಳು: ತಾಲೀಮಿಗೂ ಮುನ್ನವೇ 21 ಅಶ್ಚಗಳಲ್ಲಿ ಎರಡು ಅಶ್ವಗಳು ಸಿಡಿ ಮದ್ದಿಗೂ ಮೊದಲೇ ಆನೆಗಳನ್ನು ಹತ್ತಿರದಿಂದ ಕಂಡು ಬೆದರಿದವು. ಇದರಿಂದಾಗಿ ಕಮಾಂಡ್ ಗಳು ಅವನ್ನು ಕರೆದೊಯ್ದರು. ಅಂತೆಯೇ ಉಳಿದ ಅಶ್ವಗಳು ಬೆಚ್ಚಿದವಾದವು. ಕಮಾಂಡ್ ಗಳು ಅವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಇನ್ನೂ ಈ ಕುರಿತು ಅರಣ್ಯ ಇಲಾಖೆ ಉಪನಿರ್ದೇಶಕ ಸೌರಬ್ ಮಾತನಾಡಿ, ಮೊದಲ ತಂಡದ ಗಜಪಡೆಗಳಿಗೆ ಮಾತ್ರ ಇಂದು ತಾಲೀಮು ನೀಡಲಾಗಿದೆ. ಮೂರನೇ ತಾಲೀಮಿಗೆ ಉಳಿದ ಆನೆಗಳು ಬರಲಿದ್ದು, ಶೀಘ್ರದಲ್ಲೇ ಪಟ್ಟದ ಆನೆ ಹಾಗೂ ಶ್ರೀರಂಗಪಟ್ಟಣ ದಸರಾ ಆನೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ನಗರಪೆÇಲೀಸ್ ಆಯುಕ್ತ ರಮೇಶ್ ಬಾನೋತ್ ಸೇರಿ ಅನೇಕರು ಉಪಸ್ಥಿತರಿದ್ದರು.