ಎರಡನೇ ವೀಕೆಂಡ್ ಕರ್ಫ್ಯೂ: ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ

ರಾಯಚೂರು.ಜ.೧೫-ಹೆಚ್ಚಾಗುತ್ತಿರುವ ಕೋರೋನಾ ಮತ್ತು ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ನ ಹಿನ್ನೆಲೆ ನಿನ್ನೆ ರಾತ್ರಿಯಿಂದ ಎರಡನೇ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ನಗರದಲ್ಲಿ ಈಗಾಗಲೇ ಹೆಚ್ಚಾಗುತ್ತಿರುವ ಕೋರೋನಾ ಕೇಸ್ ಗಳ ನಿಯಂತ್ರಣಕ್ಕೆ ಬಿಗಿಯಾದ ಕ್ರಮ ಕೈಗೊಳ್ಳಲಾಗಿದ್ದು. ಮೊದಲನೇ ವೀಕೆಂಡ್ ಕರ್ಫ್ಯೂ ನಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು ಕೇವಲ ಹಣ್ಣು ,ತರಕಾರಿ, ಆಸ್ಪತ್ರೆ ಗಳಂತಹ ಅಗತ್ಯ ಕೆಲಸಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ನಡೆದಂತಹ ಮಿನಿ ಲಾಕ್ ಡೌನ್ ನಗರದ ಪ್ರತಿ ವೃತ್ತಗಳಲ್ಲಿ ಪೊಲೀಸರು ನಾಕಬಂದಿ ಹಾಕಿ ಅನಗತ್ಯವಾಗಿ ಸಂಚರಿಸುವವರು ನಿಯಂತ್ರಣವನ್ನು ಹಾಗೂ ಮಾಸ್ಕ್ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸಿ ಎಚ್ಚರಿಸಿದರು. ಡಿ.ಸಿ.ಮನೆಯ ಹತ್ತಿರ ಮದ್ಯಾಹ್ನದ ಸಮಯಕ್ಕೆ ಸುಮಾರು ೪೫ರಿಂದ ೫೦ ಜನರಿಗೆ ದಂಡ ವಿಧಿಸಲಾಗಿದೆ.
ಕೇಂದ್ರ ಬಸ್ ನಿಲ್ದಾಣದಲ್ಲಿ ಜನರ ಅಗತ್ಯತೆಗೆ ತಕ್ಕಂತೆ ಬಸ್ ಗಳ ಸಂಚಾರ ನಡೆಯುತ್ತಿತ್ತು. ಅಲ್ಲಲಿ ಕೆಲವು ಜನರ ಓಡಾಟ, ಸಂಚಾರ ಕಂಡುಬಂದರೂ ಪೊಲೀಸರು ಅದಕ್ಕೆ ಬ್ರೇಕ್ ಹಾಕಿದರು.
ಇನ್ನು ಸೋಮವಾರ ಮುಂಜಾನೆವರೆಗೂ ಕರ್ಫ್ಯೂ ಮುಂದುವರೆಯಲಿದ್ದು ಪೊಲೀಸರು ತಮ್ಮ ಕಾರ್ಯವನ್ನು ಯಥಾಪ್ರಕಾರ ನಿರ್ವಹಿಸಲಿದ್ದಾರೆ. ಕರ್ಫ್ಯೂ ವಿಧಿಸಿದ್ದ ರಿಂದ ನಗರದಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಬಿಟ್ಟರೆ ಉಳಿದಂತೆ ಶಾಂತವಾಗಿತ್ತು.