ಎರಡನೇ ಮದುವೆಗೆ ಅವಕಾಶ ನೀಡದ ಪತ್ನಿಗೆ ಚಾಕುವಿನಿಂದ ಇರಿದ ಪತಿ

ವಿಜಯಪುರ,ಡಿ.1-ಎರಡನೇ ಮದುವೆಗೆ ಅವಕಾಶ ನೀಡದ ಪತ್ನಿಗೆ ಪತಿ ಚಾಕುವಿನಿಂದ ಇರಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ನಡೆದಿದೆ.
ಗೋಪಾಲ ಶಂಕರಪ್ಪ ಹರಿಜನ ಎಂಬಾತನೆ ಪತ್ನಿ ಶೀಲಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಬಹಿರ್ದೆಸೆಗೆ ಹೋಗಿದ್ದ ಶೀಲಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಶೀಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಪಾಲ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.