ಎರಡನೇ ಬೆಳೆಗೆ ನೀರು ಶೀಘ್ರದಲ್ಲೇ ನಿರ್ಧಾರ- ಆನಂದಸಿಂಗ್

ಬಳ್ಳಾರಿ:ನ.1- ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಬೇಸಿಗೆ ಅವಧಿಯ ಎರಡನೇ ಬೆಳೆಗೆ ನೀರು ಬಿಡುವ ಕುರಿತು ಚರ್ಚಿಸಲು ಸಧ್ಯದಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಂಗಭದ್ರ ಜಲಾಶಯ ಇಂದಿಗೂ ಭರ್ತಿಯಾಗಿದೆ. ಇದರಿಂದ ಎರಡನೇ ಬೆಳೆ ಬೆಳೆಯಲು ನೀರಿನ ಸಮಸ್ಯೆ ಇಲ್ಲ. ಆದರೆ ಯಾವ ಯಾವ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಿ ಬೆಳೆಯನ್ನು ಉತ್ತಮವಾಗಿ ಪಡೆಯಲು ಸಾಧ್ಯ ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಬಳ್ಳಾರಿ, ಕೊಪ್ಪಳ ಮತತು ರಾಯಚೂರು ಜಿಲ್ಲೆಗಳ ಶಾಸಕರ, ಸಂಶದರ ಸಭೆ ಕರೆದು ನಿರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಿದೆ. ಈ ಸಭೆಯನ್ನು ಸಧ್ಯದಲ್ಲೇ ಕರೆಯುವುದಾಗಿ ಹೇಳಿದರು.
ಹಂಪಿ ಉತ್ಸವ:
ಹಂಪಿ ಉತ್ಸವನ್ನು ಈ ಮೊದಲೇ ಹೇಳಿದಂತೆ ಈ ತಿಂಗಳಲ್ಲಿ ಒಂದು ದಿನದ ಮಟ್ಟಿಗೆ ಸರಳವಾಗಿ ಆಚರಿಸಲಿದೆ. ಸಧ್ಯ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಗಹಿತೆ ಇದೆ. ಅದಕ್ಕಾಗಿ ಅದು ಮುಗಿದ ತಕ್ಷಣ ನಡೆಸಲು ನಿರ್ಧರಿಸಿದೆಂದರು. ಈ ಉತ್ಸವ ಆಚರಣೆ ಬಗ್ಗೆ ಸರ್ಕಾರ ನಿರ್ಲಕ್ಷದ ಧೋರಣ ಇಲ್ಲ. ಈಗಾಗಲೇ ಬಜೆಟ್ ನಲ್ಲಿ ಇದಕ್ಕಾಗಿ ಹಣ ಮೀಸಲಿದೆಂದರು.
ಕೊರೋನಾ ಇಳಿಕೆ:
ಬಳ್ಳಾರಿ ಜಿಲ್ಲೆ ಮತ್ತು ರಾಜ್ಯದಲ್ಲೂ ಕೊವೀಡ್ ಕಡಿಮೆಯಾಗುತ್ತಿದೆ.. ಸಾಮಾಜಿಕ ಅಂತರ, ಮಾಸ್ಕ್‍ನ್ನು ಎಲ್ಲರೂ ಬಳಕೆ ಮಾಡಿದರೆ ಅದರಿಂದ ಸಂಪೂರ್ಣ ನಿಯಂತ್ರಣ ಮಾಡಬಹುದು. ಚಳಿಗಾಲದಲ್ಲಿ ಕೊರೋನಾ ಹೆಚ್ಚಾಗಬಹುದು ಅದಕ್ಕಾಗಿ ಎಲ್ಲರೂ ಜಾಗೃತರಾಗಿರಬೇಕೆಂದು ಮನವಿ ಮಾಡಿದರು.
ಗೆಲುವು ಖಚಿತ:
ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೂ ನಮ್ಮ ಪಕ್ಷದ ಅಭ್ಯರ್ಥಿಗಳೂ ಸಹ ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ನಮ್ಮ ಸರ್ಕಾರದ ಕೆಲಸ ನೋಡಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.
ನೀತಿ ಸಂಹಿತೆ:
ವಿಜಯ ನಗರ ಜಿಲ್ಲೆಯ ರಚನೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲ್ಲ. ನೀತಿ ಸಂಹಿತೆ ಇದೆ ಎಂದು ಜಾರಿಕೊಂಡ ಆನಂದ ಸಿಂಗ್ ಅವರು ಬಗಲಿನಲ್ಲಿಯೇ ಇದ್ದ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಅಣ್ಣಾ ನೀನೇನು ಗಾಬರಿಯಾಗಬೇಡಿ ಎಂದುದು ಗಮನ ಸೆಳೆಯಿತು.