ಎರಡನೇ ಬಾರಿ ಆಯ್ಕೆಗೊಳಿಸಿದಕ್ಕೆ ರೈತಾಪಿ ವರ್ಗಕ್ಕೆ ಅಭಿನಂದನೆಗಳು: ಶೇಖರ ನಾಯಕ

ಇಂಡಿ:ಫೆ.15: ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ,ಮರಗೂರ ಚುನಾವಣೆಯಲ್ಲಿ ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಅವರ ಪೇನಲ್‍ಗೆ ಅಭೂತಪೂರ್ವ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಇಂಡಿ.ಸಿಂದಗಿ, ಚಡಚಣ ಭಾಗದ ರೈತಾಪಿ ವರ್ಗಕ್ಕೆ ಹಾಗೂ ಪರೋಕ್ಷ ಅಪರೋಕ್ಷವಾಗಿ ಅರ್ಶೀವಾದ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ ತಿಳಿಸಿದ್ದಾರೆ.
ನಾಲ್ಕು ದಶಕಗಳಿಂದ ನೆನಗುದಿಗೆ ಬಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ಹಾಳು ಬಿದ್ದಂತಾಗಿತ್ತು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ನಂತರ ಅವರ ಆರಾಧ್ಯೆ ದೇವರಾದ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರ ಸನ್ನಿಧಾನದಲ್ಲಿ ಶ್ರೀಭೀಮಾಶಂಕರ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಮುಂದಿನ ಚುನಾವಣೆ ನಿಲ್ಲುವೆ ಒಂದು ವೇಳೆ ನಿರ್ಮಾಣ ಮಾಡದಿದ್ದರೆ ರಾಜಕೀಯ ನಿವೃತ್ತಿ ಎಂದು ಪ್ರತಿಜ್ಷೆ ಮಾಡಿ ಸತತ ಶ್ರಮದೊಂದಿಗೆ ಬಿಡುವಿಲ್ಲದೆ ದುಡಿದು ಬದ್ದತೆಯಿಂದ ಆಡಿದಂತೆ ಮಾಡಿ ತೋರಿಸಿದ ಶಾಸಕ ಹಾಗೂ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ರಾಜಕೀಯ ಚಾಣುಕ್ಯ.
ನಂಜುಂಡಪ್ಪ ವರದಿಯಂತೆ ಈ ಭಾಗದ ಯಾವತ್ತೂ ನಿರಂತರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ ಅದರಲ್ಲಿ ಸಿಂದಗಿ- ಇಂಡಿ ಸದಾ ಬರದಲ್ಲಿ ರೈತರ ಬದುಕು ಸಾಗಿಸಿಸಬೇಕಾದ ಪರಸ್ಥಿತಿ ಇದೆ. ಶಾಸಕರಾದ ನಂತರ ಇಂಡಿ ತಾಲೂಕಿನ ಬದಲಾವಣೆ ಪರ್ವ ಪ್ರಾರಂಭವಾಗಿದೆ.ಈ ಹಿಂದೆ ರೈತರು ಬೆಳೆದ ಕಬ್ಬು ಕಾರ್ಖಾನೆಗಳಿಗೆ ಸಾಗಿಸದೆ ಸುಟ್ಟು ಹಾಕಿದ ಘಟನೆಗಳು ನಾವು ಮರೇಯುವಂತಿಲ್ಲ ಈ ಕಾರ್ಖಾನೆ ಕಟ್ಟಿರುವದರಿಂದ ರೈತರ ಸಂಕಷ್ಟ ದೂರವಾಗಿ ಈ ಭಾಗದ ಕಲ್ಪವೃಕ್ಷವಾಗಿ ಕಂಗೋಳಿಸುತ್ತಿದೆ. ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಅನೇಕ ಬಡ ದುಡಿಯುವ ಕೈಗಳಿಗೆ ಉದ್ಯೋಗ ಸಿಕ್ಕಿದೆ. ಶಾಸಕ ಪಾಟೀಲರು ದೂರದೃಷ್ಠಿಯನ್ನು ಹೊಂದಿದ್ದಾರೆ ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸುವುದು ಕಷ್ಟದ ಕೆಲಸ ಅವರು ಶಾಸಕರಾಗಿರುವದರಿಂದ ವಿವಿಧ ಮೂಲಗಳಿಂದ ಅನುಧಾನ ತಂದು ನಡೆಸುವ ಸಾಮಥ್ರ್ಯ ಹೊಂದಿದ್ದಾರೆ , ಈ ಚುನಾವಣೆ ನ್ಯಾಯ ,ನೀತಿ,ಧರ್ಮದ ಚುನಾವಣೆ ಮತ್ತೆ ಅಧ್ಯಕ್ಷರಾಗಿರುವುದರಿಂದ ಕಾರ್ಖಾನೆ ಬೇರೆ ವಿಧದಲ್ಲಿ ಸಾಗಲಿದೆ ಎಂದರು.