ಎರಡನೇ ಬಾರಿಗೆ ಚಂದ್ರಶೇಖರ್ ಪಾಟೀಲ್ ಗೆಲುವು ;ಅರುಣಕುಮಾರ್ ಎಂ.ವೈ. ಪಾಟೀಲ್ ಹರ್ಷ

ಕಲಬುರಗಿ ;ಜೂ.8: ಈಶಾನ್ಯ ಪದವೀಧರ ಮತ ಕ್ಷೇತ್ರದಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ್ ಪಾಟೀಲ್ ಅವರು ಎರಡನೇ ಬಾರಿಗೆ
ಆಯ್ಕೆ ಯಾಗಿರುವುದು ಸಂತೋಷ ತಂದಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಶಾಸಕ ಎಂ.ವೈ. ಪಾಟೀಲ್ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರು ತಿಳಿಸಿದ್ದಾರೆ.

ಅಭ್ಯರ್ಥಿ ಡಾ. ಚಂದ್ರಶೇಖರ್ ಪಾಟೀಲ್ ಅವರ ಪರವಾಗಿ ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಪದವೀಧರ ಮತದಾರರಿಗೆ ಭೇಟಿಯಾಗಿ ಕಾಂಗ್ರೆಸ್ ಪಕ್ಷದ ಧ್ಯೇಯ ಧೋರಣೆಗಳ ಕುರಿತು ಮನವರಿಕೆಮಾಡುವ ಮೂಲಕ ಡಾ. ಚಂದ್ರಶೇಖರ್ ಪಾಟೀಲ್ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು.
ಮತದಾರರು ಕೂಡಾ ನಮ್ಮ ಪಕ್ಷದ ಮೇಲೆ, ಅಭ್ಯರ್ಥಿ ಮೇಲೆ ನಂಬಿಕೆ ಇಟ್ಟುಪ್ರಥಮ ಪ್ರಾಶಸ್ಯದ ಮತಗಳನ್ನು ನೀಡುವ ಮೂಲಕ ಡಾ. ಚಂದ್ರಶೇಖರ್ ಪಾಟೀಲ್
ಅವರನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಮತ ನೀಡಿದ ಮತದಾರರಿಗೆ ವಿಶೇಷವಾಗಿ ಅಭಿನಂದನೆಗಳುಸಲ್ಲಿಸುತ್ತೇನೆ ಎಂದು ಅರುಣಕುಮಾರ ಪಾಟೀಲ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.