ಎರಡನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ

ದಾವಣಗೆರೆ,ಏ.8: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರ ಮುಷ್ಕರ 2ನೇ ದಿನವೂ ಮುಂದುವರೆದಿದೆ.ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ನಿಲ್ದಾಣವು ಪ್ರಯಾಣಿಕರು ಮತ್ತು ಬಸ್ ಇಲ್ಲದೆ ಎರಡನೇ ದಿನವೂ ಬಣಗೂಡುತ್ತಿತ್ತು. ಬಸ್‌ಗಳ ಮಾಹಿತಿ ಕೇಳಲು ಬರುವ ಪ್ರಯಾಣಿಕರಿಗೆ ಮಾಹಿತಿ ನೀಡಲು ಮರ‍್ನಾಲ್ಕು ಜನ ಸಿಬ್ಬಂದಿ, ಮುಷ್ಕರದ ಹಿನ್ನೆಲೆಯಲ್ಲಿ ಬಂದೋಬಸ್ತ್ಗೆ ನಿಯೋಜಿಸಿದ್ದ ಪೊಲೀಸರನ್ನು ಹೊತರು ಪಡಿಸಿದರೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯಾವೊಬ್ಬ ಪ್ರಯಾಣಿಕರು ಕಂಡು ಬರಲಿಲ್ಲ.ಮುಷ್ಕರಕ್ಕೂ ಮುಂಚೆ ಲಾಂಗ್ ರೂಟ್‌ಗೆ ಹೋಗಿ, ಅಲ್ಲಿ ತಂಗಿ ಇಂದು ಶ್ರೀಶೈಲ, ಹೈದ್ರಾಬಾದ್ ಮತ್ತು ಮಂಗಳೂರಿನಿAದ ನಿಲ್ದಾಣಕ್ಕೆ ವಾಪಾಸ್ಸಾದ ನಾಲ್ಕು ಬಸ್ಸುಗಳನ್ನು ಹರಿಹರ-ದಾವಣಗೆರೆ ಮಾರ್ಗದಲ್ಲಿ ಒಂದು ಟ್ರಿಪ್ ಓಡಿಸಲಾಯಿತು. ಆದರೆ, ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆಚ್ಚುಬಾರದ ಕಾರಣಕ್ಕೆ ಹರಿಹರಕ್ಕೆ ಹೋಗಿರುವ ನಾಲ್ಕು ಬಸ್‌ಗಳು ಮತ್ತೆ ದಾವಣಗೆರೆ ಕಡೆಗೆ ಮತ್ತೆ ಸುಳಿದಿಲ್ಲ. ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಬೆಂಗಳೂರು ಹೋಗುವ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಸರ್ಕಾರಿ ಬಸ್ ನಿಲ್ದಾಣಕ್ಕೆ ನಾಲ್ಕು ಖಾಸಗಿ ಬಸ್‌ಗಳನ್ನು ಕಳುಹಿಸಿದ್ದರು. ಆದರೆ, ಮಧ್ಯಾಹ್ನ 12 ಗಂಟೆಯ ವರೆಗೆ ಆ ಬಸ್‌ಗಳಲ್ಲಿ ಹತ್ತು ಸೀಟುಗಳು ಸಹ ಹತ್ತಿರಲಿಲ್ಲ. ಹೀಗಾಗಿ ಆ ಬಸ್‌ಗಳು ಅಲ್ಲಿಂದ ಕದಲದೆ ಅಲ್ಲಿಯೇ ನಿಂತಿದ್ದವು.ಇನ್ನೂ ಸರ್ಕಾರಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಏರು ಗತಿಯಲ್ಲಿ ಕಾಣಿಸಲಿಲ್ಲ. ಈ ಹಿಂದಿನ ದಿನಗಳಿಂತ ಸ್ವಲ್ಪ ಕಡಿಮೆಯೇ ಇತ್ತು. ಖಾಸಗಿ ಬಸ್‌ಗಳು ಹಳ್ಳಿ ಮಾರ್ಗದಲ್ಲಿ ಸಂಚರಿಸುವುದರಿAದ ಜಿಲ್ಲಾ ಕೇಂದ್ರಗಳಿAದ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗಳು ಲಾಂಗ್ ರೂಟ್‌ನಲ್ಲಿ ಸಂಚರಿಸುತ್ತಿದ್ದ ಬಸ್‌ಗಳಿಗೆ ಹೋಗುವ ಪ್ರಯಾಣಿಕರ ಪರದಾಟ ಕಂಡು ಬಂತು. ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಮತ್ತು ನಿರ್ವಾಹಕರ ಮುಷ್ಕರದಿಂದ ಖಾಸಗಿ ಬಸ್‌ಗಳಿಗೆ ಹೇಳು ಕೊಳ್ಳುವ ರೀತಿಯಲ್ಲಿ ಏನು ಲಾಭ ಆಗಿಲ್ಲ. ಆದರೆ, ನಷ್ಟ ಸಂಭವಿಸಿಲ್ಲ ಅಷ್ಟೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದೂರದ ಊರುಗಳಿಂದ ಬರುವ ಪ್ರಯಾಣಿಕರು ಖಾಸಗಿ ಬಸ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತಿದ್ದರು. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಸ್ತಗಿತಗೊಂಡಿರುವುದರಿAದ ನಮ್ಮ ಬಸ್‌ಗಳ ಪ್ರಯಾಣಿಕರ ಸಂಖ್ಯೆಯೂ ತಗ್ಗಿದೆ ಎಂದು ಬಸ್ ಏಜೆಂಟ್ ನಾಗರಾಜ್ ಮಾಹಿತಿ ನೀಡಿದರು.