
ಕಲಬುರಗಿ:ಮೇ.24: ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಪೆÇಲೀಸ್ ಅಧಿಕಾರಿಗಳು ಕಟ್ಟಿರುವ ಕಂಪೌಂಡ್ ಗೋಡೆ ತೆರವಿಗೆ ಒತ್ತಾಯಿಸಿ ಬುಧವಾರ ರಟಕಲ್ ಗ್ರಾಮ ಪಂಚಾಯತ್ ಎದುರುಗಡೆ ಸೌಹಾರ್ದ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಐತಿಹಾಸಿಕ ಹಿನ್ನೆಲೆ ಇರುವ ತಲಾತಲಾಂತದಿಂದ ದರ್ಗಾದ ಮೇಲೆ ನಂಬಿಕೆ ಹೊಂದಿರುವ ಹಿಂದೂ ಮುಸ್ಲಿಂರು ಸೌಹಾರ್ದ, ಸಹಬಾಳ್ವೆಯಿಂದ ಬದುಕಿದ್ದಾರೆ. ಇಂತಹ ಸೌಹಾರ್ದ ನಾಡಿನಲ್ಲಿ ಕಂಪೌಡ್ ಕಟ್ಟಿ ಶಾಂತಿ ಕದಡುವ ಕೆಲಸ ಮಾಡಬಾರದೆಂದು ರಟಕಲ್ ಗ್ರಾಮಸ್ಥರು ಆರೋಪಿಸಿದ್ದಾರೆ.
ರಟಕಲ್ ಪೆÇಲೀಸ್ ಠಾಣೆಯ ಕಂಪೌಂಡನಲ್ಲಿ ಹಜರತ್ ಮಹೇಬೂಬ್ ಸುಬಾನಿ ದರ್ಗಾಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಗ್ರಾಮದಲ್ಲಿ ಪೆÇಲೀಸ್ ಠಾಣೆ ಸ್ಥಾಪನೆ ಆಗುವ ಮೊದಲೆ ದರ್ಗಾ ಇತ್ತು. ಗ್ರಾಮಸ್ಥರು ಮನವೊಲಿಸಿ ಪೆÇೀಲಿಸ್ ಸ್ಟೇಷನ್ ಗೆ ( ಸರ್ಕಾರಕ್ಕೆ) ದರ್ಗಾವನ್ನು ತೆರವು ಗೊಳಿಸಬಾದು ಹಾಗೆ ಇರಬೇಕೆಂದು ಷರತ್ತು ಬದ್ಧ ನೀಡಲಾಗಿದೆ ಎಂದು ಹಿರಿಯರಾದ ಅಣಕಲ್ ಮುಗ್ರ್ಯಣ ಅವರು ತಿಳಿಸಿದರು.
ಗ್ರಾಮದಲ್ಲಿ ಜನರು ಜಾತಿಬೇಧ ತಾರತಮ್ಯವಿಲ್ಲದೆ ಸರ್ವಧರ್ಮದವರು ಈ ದರ್ಗಾಕ್ಕೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ಪ್ರತಿ ಗುರುವಾರ ಮತ್ತು ಅಮವಾಸೆ, ಹುಣ್ಣಿಮೆ,ಹಬ್ಬ ಹರಿದಿನಗಳು ಸೇರಿದಂತೆ ಪ್ರತಿದಿನ ನೂರಾರು ಜನರು ಪ್ರಾರ್ಥನೆಗೆಂದು ದರ್ಗಾಕ್ಕೆ ಬರುತ್ತಾರೆ.
ಗ್ರಾಮಸ್ಥರ ವಿರೋಧ ನಂತರವು ರಟಕಲ್ ಪೆÇಲೀಸ್ ಠಾಣೆಯ ಪೆÇಲೀಸರು ತರಾತುರಿಯಲ್ಲಿ ಜನರ ಭಾವನೆಗಳನ್ನು ಲೆಕ್ಕಿಸದೇ ದರ್ಗಾಕ್ಕೆ ಇರುವ ದ್ವಾರದಲ್ಲಿ ಕಂಪೌಂಡ ಕಟ್ಟಿದ್ದದಾರೆ. ಸಾರ್ವಜನಿಕವಾಗಿ ಎಲ್ಲಾ ಭಕ್ತರಿಗೆ ದರ್ಶನ ಪಡೆಯಲು ಪ್ರವೇಶ ದ್ವಾರ ನಿಬರ್ಂಧನೆ ಮಾಡಿ ಸಮಸ್ಯೆ ಮಾಡಿದ್ದಾರೆಂದು ಧರಣಿ ಸತ್ಯಾಗ್ರಹ ಉದ್ದೇಶಿಸಿ ಪ್ರಾಂತ್ಯ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ರಟಕಲ್ ಗ್ರಾಮವೂ ಸೌಹಾರ್ದ ಮತ್ತು ಭಾವೈಕ್ಯತೆಯಿಂದ ಕೂಡಿದ ಗ್ರಾಮವಾಗಿದ್ದು , ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ದರ್ಗಾದ ಪ್ರವೇಶ ದ್ವಾರದಲ್ಲಿ ಕಟ್ಟಿರುವ ಕಂಪೌಂಡ ತೆರವುಗೊಳ್ಳಿಸಿ , ಭಕ್ತರಿಗೆ ದರ್ಗಾದ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೌಹಾರ್ದ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಸೂಲ್ ಸಾಬ್, ರೇವಣಸಿದ್ದಪ್ಪ, ಶ್ರೀ ಜೇಜಿ ಮುತ್ಯಾ, ಸಿದ್ದಪ್ಪ, ಮಕ್ಬುಲ್ ಸಾಬ ಗೌಂಡಿ, ಇರಣ್ಣ, ಮೊಹಮ್ಮದ್ ಮಿಯ್ಯಾ ಇಕ್ಬಾಲ್ ಪಟೇಲ್, ಸೌಕತ್ ಅಲಿ, ಮೋದಿನ್ ಸಾಬ್, ಸಲೀಮಾ ಬೇಗಂ, ಹಸೀನಾ, ಗೋರಿಮಾ, ಹುಸೇನ್ ಬೀ, ಮಶಾಕ್ ಸಾಬ್, ಮೊಹಮ್ಮದ್ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಪೆÇಲೀಸ್ ಠಾಣೆಯ ಆವರಣದಲ್ಲಿ ವಕ್ಫ್ ಸಂಸ್ಥೆಗೆ ಸಂಬಂಧಿಸಿದ ಆಸ್ತಿ ಹೊಂದಿರುವ ದರ್ಗಾ ಇದೆ. ಈಗಾಗಲೇ ಠಾಣೆಯ ಸುತ್ತ ಕಂಪೌಂಡ ಕಾಮಗಾರಿ ಪೂರ್ಣಗೊಂಡಿದೆ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಉನ್ನತ ಪೆÇಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಎಸ್.ಪಿ ಅವರು ನಾಲ್ಕು ದಿನ ರಜೆ ಮೇಲೆ ಇರುವುದರಿಂದ ಆದೇಶಕ್ಕಾಗಿ ಕಾಯುತಿದ್ದೆವೆ. – ದವುಲತ್ , ಸರ್ಕಲ್ ಇನ್ಸ್‍ಪೆಕ್ಟರ್ ಸುಲೇಪೆಟ್.
ಪೆÇಲೀಸರು ದರ್ಗಾದ ಪ್ರವೇಶಕ್ಕೆ ಕಟ್ಟಿರುವ ಅಡ್ಡ ಗೋಡೆ ತೆರವಿಗಾಗಿ ಗುರುವಾರ ತುರ್ತು ಗ್ರಾಮ ಪಂಚಾಯತಿ ಸದಸ್ಯರ ಸಭೆ ಕರೆದಿದ್ದೇವೆ. ಸಭೆಯಲ್ಲಿ ಪೆÇ್ರೀಸಿಡಿಂಗ್ ಮಾಡಿ ಪೆÇಲೀಸರಿಗೆ ಗೋಡೆ ತೆರವಿಗೆ ಸೂಚನೆ ನೀಡಲಾಗುವುದು. – ಸೋಮಶೇಖರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಟಕಲ್.