ಎರಡನೇ ಅಲೆ ಹೋಗಲಾಡಿಸುವ ಸಂಕಲ್ಪ

ಜಗಳೂರು.ಜೂ.೧;  ಬಿಜೆಪಿ ಆಡಳಿತ ಪಕ್ಷದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂಟನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು, ಮೋದೀಜಿಯವರು ಕೋವಿಡ್ ಎರಡನೇ ಅಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಸಂಕಲ್ಪ ಮಾಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿಯೇ ಆಮ್ಲಜನಕ ಉತ್ಪನ್ನ ಮಾಡುವ ಘಟಕವನ್ನು ಸುಮಾರು 80 ಲಕ್ಷಗಳಲ್ಲಿ ವೀಕಡ್ ಕ್ಲೀನ್ ಮ್ಯಾಚ್ ಕಂಪನಿಯು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಮಾಡಲಾಗುತ್ತಿದೆ .ಆಮ್ಲಜನಕ ಉತ್ಪನ್ನ ಘಟಕವನ್ನು ಸ್ಥಾಪನೆ ಮಾಡಿದರೆ  ಆಮ್ಲಜನಕ ಕೊರತೆ ನೀಗಿಸಿ ರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ದೊರೆತು ಅನುಕೂಲಕರವಾಗಲಿದೆ ಎಂದರು. ಶಾಸಕರಾದ ಎಸ್.ವಿ.ರಾಮಚಂದ್ರರವರು ಎಲ್ಲಾ ಅಧಿಕಾರಿಗಳೊಂದಿಗೆ ಮೆದಗಿನಕೆರೆ ಕೋವಿಡ್ ಸೆಂಟರ್ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಅವರ ಆರೋಗ್ಯ ಕ್ಷೇಮವನ್ನು ವಿಚಾರಣೆ ಮಾಡಿದ್ದಾರೆ.  ಕೋವಿಡ್‌ನಿಂದ ಗುಣಮುಖರಾಗಿ ಹೊರ ಬಂದು ಎಲ್ಲಾ ಅಧಿಕಾರಿಗಳನ್ನು ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯ ಸಂಸದರಾದ ಸಿದ್ದೇಶ್ವರ್  ಜಿಲ್ಲಾಧ್ಯಂತ ಪ್ರತಿಯೊಂದು ಕೋವಿಡ್ ಸೆಂಟರ್ ಗಳಿಗೆ, ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಕೋವಿಡ್ ಹೋಗಲಾಡಿಸಲು ಕೋವಿಡ್‌ದಾರರೊಂದಿಗೆ ಮಾತನಾಡಿ ದೈರ್ಯ ತುಂಭುವ ಕೆಲಸವನ್ನು ಅಧಿಕಾರಿಗಳ ಜೊತೆಯಲ್ಲಿ ಕೆಲಸನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಪಾಪಲಿಂಗಪ್ಪ ನವೀನ್ ಕುಮಾರ್, ಮುಖಂಡರಾದ ಶಿವಣ್ಣ. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.