ಎರಡನೇಯ ದಿನ ಮುಂದುವರೆದ ಪ್ರೋಟೇಸ್ಟ್, ಅಧಿಕಾರಿಗಳು ಮೌನ

ಮುದ್ದೇಬಿಹಾಳ :ಸೆ.21: ಪಟ್ಟಣದಲ್ಲಿ ತಹಶೀಲ್ದಾರ ಕಚೇರಿಯ ಎದುರುಗಡೆ ಅಕ್ರಮ ಮದ್ಯ ಮಾರಾಟ ವೀರೋಧಿಸಿ ನಡೆಯುತ್ತಿರುವ ದರಣಿ ಸತ್ಯಾಗ್ರಹ ಎರಡನೇಯ ದಿನಕ್ಕೆ ಮುಂದುವರೆದಿದೆ ಸತ್ಯಾಗ್ರಹಕ್ಕೆ ತಾಲೂಕಾ ವಿಕಲ ಚೇತನರ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಬೆಂಬಲ ನೀಡಿ ಮಾತನಾಡಿದ ವಿಕಲಚೇತನದ ಮುಖಂಡರು ಅಧಿಕಾರಿಗಳು ಲಿಖಿತ ಉತ್ತರ ನೀಡಿದರು ಇನ್ನೂವರೆಗೆ ಕ್ರಮ ಕೈಗೋಳ್ಳಲು ಹಿಂದೇಟು ಯಾಕೆ ಹಾಕುತ್ತಿದ್ದಾರೆ,
ನಿಯಮದ ಪ್ರಕಾರ ತಾಲೂಕಿನಲ್ಲಿ ಯಾವುದೇ ಮಧ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿಲ್ಲಾ, ಜನಪ್ರತಿನಿಧಿಗಳು, ತಾಲೂಕಾಡಳಿತ, ಜಿಲ್ಲಾಡಿಳಿತದ ದಿವ್ಯ ನಿರ್ಲಕ್ಷ್ಯ ಈ ಸತ್ಯಾಹಗ್ರಕ್ಕೆ ತೋರಿರುವದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ತಾಲೂಕಾ ಅಬಕಾರಿ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಘಟಿಕರು ಅಕ್ರಮ ಮಧ್ಯ ಮಾರಾಟದ ವಿಷಯದ್ವಯ ಎರಡನೇಯ ಬಾರಿಯೂ ಹೋರಾಟಕ್ಕೆ ಕುಳಿತರು,
ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಮಧ್ಯ ಮಾರಾಟ ನಿಂತಿಲ್ಲಾ, ಮೇಲಾಧಿಕಾರಿಗಳ ಇದರ ಬಗ್ಗೆ ಗಂಭೀರವಾಗಿ ಪರೀಗಣಸಿ ಕ್ರಮ ಕೈಗೋಳ್ಳದೆ ಇದ್ದರೇ, ಪ್ರತಿ ಗ್ರಾಮೀಣದಿಂದ ಹೇಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಸತ್ಯಾಗ್ರಹ ಮಾಡಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ,ಅದಕ್ಕೇಲ್ಲಾ ಅನುವು ಮಾಡಿ ಕೋಡದೇ ಶೀಘ್ರದಲ್ಲಿಯೇ ಧರಣಿ ನಿರತರ ಬೇಡಿಕೆಗಳನ್ನು ಇಡೇರಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮಧ್ಯ ಮಾರಾಟ ನಿಲ್ಲಬೇಕು, ಎಂದು ಆಗ್ರಹಿಸಿದರು. ನಂತರ ಧರಣಿ ಸತ್ಯಾಗ್ರಹಿಗಳು ಜಿಲ್ಲಾಧಿಕಾರಿಗಳಿಗೆ ಸಮಸ್ಯಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಧರಣಿ ನೀರತರಾದ ಮಂಜುನಾಥಸ್ವಾಮಿ ಕುಂದರಗಿ, ಬಗವಂತ ಕಬಾಡೆ, ಶಿವಾನಂದ ಪುರಾಣಿಕಮಠ, ವಾಲ್ಮೀಕಿ ಮಾಹಾಸಬಾ ಯುವ ಘಟಕದ ಅಧ್ಯಕ್ಷರಾದ ಮಂಜುನಾಥ ಪೂಜಾರಿ,ರಾಜ್ಯ ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಾನಂದ ಗೌಂಡಿ,ಸಲಾಮ ಭಾರತ ಟ್ರಸ್ಟ್ ಕಾರ್ಯಧರ್ಶಿ ಆಬ್ದುಲ್ ವಾಜೀದ್ ಹಡಲಗೇರಿ,ಬಂಜಾರಾ ಟೈಗರ್ಸ್ ರಾಜ್ಯ ಪ್ರದಾನ ಕಾರ್ಯಧರ್ಶಿ ಏಕನಾಥ ಕೇಶವ ಸಿತಿಮನಿ,ಎಮ್ ಎನ್ ರೂಡಗಿ, ವಿಕಲ ಚೇತನರ ಒಕ್ಕೂಟದ ಜಿಲ್ಲಾ ಆದ್ಯಕ್ಷ ಎಸ್ ಕೆ ಘಾಟಿ, ತಾಲೂಕಾ ಅದ್ಯಕ್ಷ ಅಡಿವೆಪ್ಪ ಕೋಡಗಾನೂರ, ಸುರೇಶ ಹಡಪದ,ದೇವೆಂದ್ರಪ್ಪ ಮಾದರ, ಗದ್ದೇಪ್ಪ ಹಾದಿಮನಿ,ಬಸಪ್ಪ ನಾಯ್ಕೋಡಿ,ನಾಗೇಶ ಅವರಾವತಿ,ಪವಾಡೇಪ್ಪ ಚಲವಾದಿ,ಬಸವರಾಜ ಅಚನೂರ,ಪಿ ಸಿ ಚಿಂಚಲಿ,ಇನ್ನೀತರರು ಇದ್ದರು.