ಎರಡನೆ ವರ್ಷ ಕೊರೋನಾ ಸೋಂಕು ಮತ್ತಷ್ಟು ಕಠಿಣ

ಜಿನೇವಾ,ಜ.೧೪- ಕೊರೊನಾ ಸೋಂಕು ಮೊದಲ ವರ್ಷಕ್ಕಿಂತ ಎರಡನೇ ವರ್ಷ ಅತ್ಯಂತ ಕಠಿಣವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.

ಅಮೆರಿಕಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸೋಂಕು ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಹೀಗಾಗಿ ಈ ದೇಶಗಳು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.

ಕೊರೋನಾ ಸೋಂಕಿಗೆ ತುರ್ತು ಲಸಿಕೆ ನೀಡುವ ಕಾರ್ಯಕ್ರಮ ವಿಶ್ವದ ಅನೇಕ ದೇಶಗಳಲ್ಲಿ ಆರಂಭವಾಗಿದ್ದರೂ ಇನ್ನೂ ಒಂದಷ್ಟು ದಿನಗಳ ಕಾಲ ಎಚ್ಚರಿಕೆಯಿಂದಿರುವುದು ಎಂದು ಅವರು ಹೇಳಿದ್ದಾರೆ.

ಮೊದಲ ವರ್ಷದ ಕೊರೋನೋ ಹೋಲಿಸಿದರೆ ಎರಡನೇ ವರ್ಷ ಇದರ ಪ್ರಸರಣ ಹೆಚ್ಚಾಗುವ ಸಾಧ್ಯತೆಗಳಿವೆ ಹೀಗಾಗಿ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಎಂದು ತಿಳಿಸಿದ್ದಾರೆ.

ವಿಶ್ವದಲ್ಲಿ ಇದುವರೆಗೂ ಸರಿಸುಮಾರು ಹತ್ತು ಕೋಟಿ ಮಂದಿಗೆ ತಗುಲಿದ್ದು ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೀಗಾಗಿ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಕಡಿಮೆಯಾಗಿದ್ದ ಸೋಂಕಿನ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ ಇದು ಸಹಜವಾಗಿ ಅಮೆರಿಕ ಸರ್ಕಾರವನ್ನು ಮತ್ತು ವಿಶ್ವದ ಅನೇಕ ದೇಶಗಳನ್ನು ಆತಂಕಕ್ಕೆ ಸಿಲುಕಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಕೊರೋನೋ ಸೋಂಕಿಗೆ ಸಂಪೂರ್ಣವಾಗಿ ರಚಿಸುವ ಸಿಗುವ ತನಕ ಎಲ್ಲರೂ ಮುಖಗವಸು ಧರಿಸುವುದು , ಸಾಮಾಜಿಕ ಅಂತರ ಕಾಪಾಡುವುದು ಆಗಾಗ ಕೈ ತೊಳೆಯುವ ಕೆಲಸವನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಚಳಿಗಾಲ ಇರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಹೀಗಾಗಿ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಮತ್ತು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ