ಎರಡನೆಯ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ

ಕರಜಗಿ :ಮಾ.13: ಅಫಜಲಪುರ ತಾಲೂಕಿನ ಸುಕ್ಷೇತ್ರ ಗೌರ್ ಕೆ ಯ ಎರಡನೇ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ಇದೇ ಶಾಲಿವಾಹನ ಶಕೆ 1944 ರ ಮಂಗಳವಾರ ದಿನಾಂಕ 21/3/2023 ರಿಂದ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವು ಶ್ರೀ ವಿಶ್ವ ರಾಧ್ಯ ಶಿವಾಚಾರ್ಯರು ಸಂಸ್ಥಾನ ಮಠ ಅಫಜಲಪೂರ ಹಾಗೂ ಅಭಿನವ ಪುಂಡಲಿಂಗ ಮಹಾರಾಜರು ಗೊಳಸರ ಇವರ ದಿವ್ಯ ಸಾನಿಧ್ಯದಲ್ಲಿ ಇದೆ ದಿನಾಂಕ 17/03/2023 ರಂದು ಜರಗಲಿದೆ.
ಹಾಗೂ ದಿನಾಂಕ ಮಾರ್ಚ್ 21 ರಂದು ಸಾಯಂಕಾಲ 7 ಗಂಟೆಗೆ ಲಕ್ಷ ದೀಪೆÇೀತ್ಸವ ನಡೆಯುತ್ತದೆ, ಹಾಗೂ ಮಾರ್ಚ್ 22 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ಜರುಗುವುದು.

ಅದೇ ದಿನ ಸಾಯಂಕಾಲ 5 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವರ ಭವ್ಯ ರಥೋತ್ಸವವು ಮಾದನ ಹಿಪ್ಪರಗಿ ಶ್ರೀಗಳು ಮತ್ತು ಆಳ್ಳಗಿ ಬೀ ಶ್ರೀಗಳಿಂದ ಜರುಗುವುದು, ಮತ್ತು ರಾತ್ರಿ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗುವುದು ನಂತರ ಚಿನ್ನದ ಗೊಬೇ ಅರ್ಥಾತ ಮರಳಿ ಬಂದ ಮಾಂಗಲ್ಯ ಎಂಬ ಸುಂದರ ಸಾಮಾಜಿಕ ಕೌಟುಂಬಿಕ ನಾಟಕ ಜರುಗುವುದು ಎಂದು ಸದ್ಭಕ್ತ ಕಮೀಟಿ ವತಿಯಿಂದ ತಿಳಿದುಬಂದಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ವಲಯ ಅಧ್ಯಕ್ಷರಾದ ಭಾರತೀಯ ಜನತಾ ಪಾರ್ಟಿಯ ಯುವ ಮುಖಂಡರಾದ ಶಂಕರ್ ತೇಗನೂರ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತಾಲೂಕ ಅಧ್ಯಕ್ಷರಾದ ಸಿದ್ದರಾಮ ಹೊಸಮನಿ ಗ್ರಾಮ ಪಂಚಾಯತ್ ಸದಸ್ಯರಾದ ದೂಂಡಿಬಾ ದಳಪತಿ , ಲಕ್ಷ್ಮಿಕಾಂತ್ ಹೂಗಾರ, ಶಿವಪುತ್ರ ತೇಗನೂರ ಉಪಸ್ಥಿತರಿದ್ದರು.