ಎಮ್.ಎನ್.ಟಿ ಶಾಲಾ ಅಂಗಳದಲ್ಲಿ ತಾರಾಲಯ

ಔರಾದ :ಮಾ.5: ಪಟ್ಟಣದ ಎಮ್. ನಾಮದೇವರಾವ ತಾರೆ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ತಾರಾಮಂಡಲ ಚಲನಚಿತ್ರ ಪ್ರದರ್ಶನವನ್ನು ಶಾಲಾ ಅಂಗಳದಲ್ಲಿ ಜರುಗಿತು.

ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ವಸ್ತು ಪ್ರದರ್ಶನ ಮಾಡಿದರು ಬಾಹ್ಯಾಕಾಶದ ಮಾಹಿತಿಯುಳ್ಳ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷೆ ಲಕ್ಷ್ಮಿಬಾಯಿ ತಾರೆ, ಅಗಸ್ತ್ಯ ಫೌಂಡೇಷನ್ ಮುಖ್ಯಸ್ಥ ಬಾಬುರಾವ ಸಲಸರೆ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಮೋಯಿನೋದ್ದಿನ, ಇಸಿಒ ಬಲಭೀಮ ಕುಲಕರ್ಣಿ, ಸಾಯಿನಾಥ ವಾಘಮಾರೆ, ಕಾರ್ಯದರ್ಶಿ ನಾಗಸೇನ ತಾರೆ, ಮುಖ್ಯ ಶಿಕ್ಷಕ ದೀಪಕ ಕಾಂಬ್ಳೆ, ರವಿ ಡೋಳೆ, ಶಿವಾನಂದ ಬೆಂದ್ರೆ, ನೀಲಾವತಿ, ಸೋನಿಕಾ ಎಂಡೆ, ಹೇಮಾವತಿ, ಪಲ್ಲವಿ, ಮಹೇಶ್ವರಿ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.