
ನವದೆಹಲಿ,ಆ.೧೭- ಎಮ್ಮೆ ಮಾಂಸ ಉತ್ಪನ್ನಗಳ ಮಾರಾಟದಲ್ಲಿ ಭಾರತದ ಅತಿ ದೊಡ್ಡ ರಫ್ತುದಾರ ದೇಶವಾಗಿದ್ದು ಮೊದಲ ತ್ರೈಮಾಸಿಕದಲ್ಲಿ ಶೇ. ೮ ಪಟ್ಟು ಲಾಭ ಹೆಚ್ಚಾಗಿದೆ ಎಂದು ಷೇರು ಮಾರುಕಟ್ಟೆಯ ವಿವರ ಈ ವಿಷಯವನ್ನು ತಿಳಿಸಿದೆ.
ಆಗ್ರಾ ಮೂಲದ ಸಂಸ್ಥೆ ಭಾರತದಿಂದ ಹೆಪ್ಪುಗಟ್ಟಿದ ಎಮ್ಮೆ ಮಾಂಸ ಉತ್ಪನ್ನಗಳಲ್ಲಿ ಅತಿದೊಡ್ಡ ರಫ್ತುದಾರರಲ್ಲಿ ಒಂದಾಗಿದೆ. ಉತ್ಪನ್ನಗಳನ್ನು ಜಗತ್ತಿನಾದ್ಯಂತ ೬೦ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮಾರಾಟದ ಶೇಕಡಾ ೯೦ ಕ್ಕಿಂತ ಹೆಚ್ಚು ಆದಾಯ ರಫ್ತುಗಳಿಂದ ಬರುತ್ತದೆ.
ಎಚ್ ಎಂ ಎ ಅಗ್ರೋ ಇಂಡಸ್ಟ್ರೀಸ್ ರಫ್ತು ಹೆಚ್ಚಳದಿಂದ ಹೆಚ್ಚಿನ ಆದಾಯದ ಕಾರಣದಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಗೆ ತನ್ನ ತ್ರೈಮಾಸಿಕ ಆದಾಯದಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಈ ವಿಷಯ ತಿಳಿಸಿದೆ.
ವರ್ಷದಿಂದ ವರ್ಷಕ್ಕೆ ೭೯೩ ಪ್ರತಿಶತದಷ್ಟು ದೊಡ್ಡ ಏರಿಕೆ ಕಾಣುತ್ತಿದೆ.ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಸಂಸ್ಥೆ ರೂ ೪.೯೩ ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ವರ್ಷ ನಿವ್ವಳ ಲಾಭ ರೂ ೧೧.೩ ಕೋಟಿಯಿಂದ ಸುಮಾರು ೪೦೦ ಪ್ರತಿಶತದಷ್ಟು ಹೆಚ್ಚಾಗಿದೆ. ಈ ವರ್ಷದ ಮಾರ್ಚ್ ೩೧ ರಂದು ಇಡೀ ಹಣಕಾಸು ವರ್ಷದಲ್ಲಿ, ನಿವ್ವಳ ಲಾಭವು ೧೨೩.೪ ಕೋಟಿ ರೂನಿಂದ ಗಣನೀಯ ಏರಿಕೆಯಾಗಿದೆ,
ಆದಾಯದಲ್ಲಿ ೧,೦೭೫ ರಷ್ಟು ಏರಿಕೆಯಾಗಿ ೯೭೧ ಕೋಟಿ ರೂ. ಕಳೆದ ವರ್ಷ ಇದೇ ಅವಧಿಯಲ್ಲಿ ೮೨.೬೨ ಕೋಟಿ ಆದಾಯ ಗಳಿಸಿತ್ತು. ತ್ರೈಮಾಸಿಕದಲ್ಲಿ ಅದರ ಒಟ್ಟು ಆದಾಯ ೯೮೦ ಕೋಟಿ ರೂ ಗಳಿಸಿತ್ತು ಎಂದು ಹೇಳಲಾಗಿದೆ
ಷೇರುಗಳು ಲಿಸ್ಟಿಂಗ್ ನಂತರ ದ್ವಿತೀಯ ಮಾರುಕಟ್ಟೆಯಲ್ಲಿ ಶೇಕಡಾ ೭ ರಷ್ಟು ಲಿಸ್ಟಿಂಗ್ ಲಾಭವನ್ನು ನೀಡಿತು. ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ,ಎಚ್‌ಎಂಎ ಆಫರ್ ಮೂಲಕ ೪೫೦ ಕೋಟಿ ರೂ ನಷ್ಟಿದೆ ಎಂದು ತಿಳಿಸಿದೆ