ಎಬಿವ್ಹಿಪಿ ವತಿಯಿಂದ ನಗರ ಅಭ್ಯಾಸ ವರ್ಗ

ತಾಳಿಕೋಟೆ:ಸೆ.21: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಳಿಕೋಟಿ ಶಾಖೆ ವತಿಯಿಂದ 2023-2024 ರ ನಗರ ಅಭ್ಯಾಸ ವರ್ಗವನ್ನು ನಗರದ ಶ್ರೀ ಕಾಳಿಕಾ ದೇವಿ ಮಂದಿರದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿಗಳಾದ ಶ್ರೀ ಸಿದ್ದಲಿಂಗ ದೇವರು ಉದ್ಘಾಟಿಸಿದರು.
ಈ ಸಮಯದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ್ ಜೀ, ಜಿಲ್ಲಾ ಸಂಚಾಲಕರಾದ ಮಂಜುನಾಥ್ ಹಳ್ಳಿ, ಯೂನಿವರ್ಸಿಟಿಯ ವಿಸ್ತಾರಕರಾದ ಸುರೇಖಾ ಕುಲಕರ್ಣಿ ಹಾಗೂ ನಗರ ಅಧ್ಯಕ್ಷರಾದ ಪೆÇ್ರ/ಆರ್. ವಿ. ಮಿಸ್ಕಿನ್, ನಗರ ಕಾರ್ಯದರ್ಶಿಯಾದ ಗುರುಪ್ರಸಾದ್ ಹಗರಗುಂಡ ಹಾಗೂ ಎಬಿವಿಪಿಯ ಎಲ್ಲಾ ಕಾರ್ಯಕರ್ತರು, ಹಿರಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ನಗರ ಅಭ್ಯಾಸ ವರ್ಗದ ಕಾರ್ಯಕ್ರಮದಲ್ಲಿ ಅಭ್ಯಾಸ ವರ್ಗದ ಅವಧಿಗಳು, ಶಾಖೆ ಸಂಚಾಲನೆ, ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವ ಹಾಗೂ ಸೈದ್ಧಾಂತಿಕ ಭೂಮಿಕೆಯ ಅವಧಿಯನ್ನು ನಡೆಸಲಾಯಿತು.
ನೂತನ ನಗರ ಕಾರ್ಯಕಾರಣಿಯ ಜವಾಬ್ದಾರಿಯ ಘೋಷಣೆಯಲ್ಲಿ ನಗರ ಕಾರ್ಯದರ್ಶಿಯಾಗಿ ಕೆ.ಪ್ರಸನ್ನ, ನಗರ ಅಧ್ಯಕ್ಷರಾಗಿ ಉಪನ್ಯಾಸಕರಾದ ಪ್ರಕಾಶ್ ವಾಲಿಕಾರ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ನಗರ ಕಾರ್ಯಕಾರಣಿಗೆ ಆಯ್ಕೆ
ತಾಲೂಕು ಸಂಚಾಲಕರಾಗಿ ಗುರುಪ್ರಸಾದ್ ಹಗರ ಗುಂಡ, ತಾಲೂಕು ಸಹ ಸಂಚಾಲಕರಾಗಿ ಕಾಶಿನಾಥ್ ತಳವಾರ, ನಗರ ಸಹ ಕಾರ್ಯದರ್ಶಿ ಗಳಾನ್ನಾಗಿ -ರಕ್ಷಿತಾ ಚಾಯ ಗೋಳ, ಸುದೀಪ್, ಸೌಮ್ಯ ಪಾಟೀಲ್, ನಗರ ಹಾಸ್ಟೆಲ್ ಪ್ರಮುಖ ಮುತ್ತಣ್ಣ, ನಗರ ಹಾಸ್ಟೆಲ್ ಸಹ ಪ್ರಮುಖರನ್ನಾಗಿ ಆನಂದ್ ತೋಟದ್, ನಗರ ಎಸ್‍ಎಫ್‍ಎಸ್ ಪ್ರಮುಖ ಲಕ್ಷ್ಮಿ, ನಗರ ಎಸ್‍ಎಫ್‍ಎಸ್ ಸಹ ಪ್ರಮುಖ ನೀಲಾ ಹಾಗೂ ರತ್ನಪ್ಪ, ನಗರ ಸಂಪರ್ಕ ಪ್ರಮುಖರನ್ನಾಗಿ ಪವನ್ ಬುಸಾರೆ ಹಾಗೂ ಸಹ ಪ್ರಮುಖ ಯಲ್ಲಾಲಿಂಗ ಪೂಜಾರಿ, ನಗರದ ಸೋಶಿಯಲ್ ಮೀಡಿಯಾ ಪ್ರಮುಖ ಸಂಪ್ರೀತ್ ಅಲ್ಲಾಪುರ್ ಹಾಗೂ ಸಹ ಪ್ರಮುಖರುಗಳಾದ ವಿನೋದ್ ಮೈಲೇಶ್ವರ, ದೇವರಾಜ್ ಕಲ್ಯಾಣಿ, ನಗರ ಹೋರಾಟ ಪ್ರಮುಖ ಬಸವರಾಜ್ ಬಂಡೇದನಾಳ ಹಾಗೂ ಸಹ ಪ್ರಮುಖ ಸಾಗರ್ ಬಡಿಗೇರ್, ನಗರದ ಖೆಲ್ ಪ್ರಮುಖ ರಮೇಶ್ ಬಸಗೆ, ಹಾಗೂ ಸಹ ಪ್ರಮುಖ ರಮೇಶ್, ಅಧ್ಯಾಯನ ಪ್ರಮುಖ ಸಮೀರ್ ಮುಜಾವರ್ ಹಾಗೂ ಸಹ ಪ್ರಮುಖ ನಿರೂಪ, ಅವರು ಆಯ್ಕೆ ಮಾಡಲಾಯಿತು.
ನಗರ ಕಾರ್ಯಕಾರಣಿ ಸದಸ್ಯ ರಾಗಿ ಶರಣ ಕುಮಾರ್, ಗೋವಿಂದ್ ರಾಜ್, ಮಲ್ಲಿಕಾರ್ಜುನ್, ಸಾಗರ್ ಬಿ, ರಮೇಶ್ ಮೇಟಿ, ಚೇತನ್, ನಾರಾಯಣ ಸಿಂಗ್, ಮಹಾಂತೇಶ್, ರಾಹುಲ್ ಚೌಹಾನ್, ಸುನಿಲ್, ಸಚಿನ್ ರಾಥೋಡ್ ಭೀಮನಗೌಡ, ಪ್ರಸನ್ ಲೋಕರೆ, ಹನುಮಂತರಾಯ, ಆದಯ್ಯ, ಅಪ್ಪ ಸಾಹೇಬ್, ರವಿ, ಸಂತೋಷ್ ದೊಡ್ಡಮನಿ, ವಿಜಯಲಕ್ಷ್ಮಿ, ಗಾಯತ್ರಿ, ಅಸ್ಲಾಂ ಮುಲ್ಲಾ, ಅಕ್ಷಯ್, ಅವರನ್ನು ಆಯ್ಕೆ ಮಾಡಲಾಯಿತು.
ಈ ಸಮಯದಲ್ಲಿ ನಗರ ಅಭ್ಯಾಸ ವರ್ಗದ ಸಂಚಲನ ಸಮಿತಿಯ ಪ್ರಮುಖರಾದ ವಿಠ್ಠಲ್ ಸಿಂಗ್ ಹಜೇರಿ, ಸಹ ಪ್ರಮುಖರಾದ ಸಂಗಮೇಶ್ ಕತ್ತಿ ಹಾಗೂ ನವೀನ್ ಗೌಡಗೇರಿ ಹಾಗೂ ಎಬಿವಿಪಿಯ ಹಿರಿಯ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.