ಎಬಿವಿಪಿ ಬಳ್ಳಾರಿ ವಿಭಾಗೀಯ ಕಾರ್ಯಾಲಯದಲ್ಲಿ ದೀಪೋತ್ಸವ

ಬಳ್ಳಾರಿ ನ 17 : ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗೀಯ ಕಾರ್ಯಾಲಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ವಿದ್ಯಾರ್ಥಿ ಪರಿಷತ್‍ನ ಹಿರಿಯ ಕಾರ್ಯಕರ್ತರು, ಹಿತೈಷಿಗಳು, ನಗರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇವರ ನಿವಾಸಗಳಿಗೆ ತೆರಳಿ ಸಿಹಿ ಹಂಚಿ, ದೀಪ ಕೊಡುವುದರ ಮೂಲಕ ಆಚರಿಸಿದರು.
ಅಲ್ಲದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಭಾಗೀಯ ವಿದ್ಯಾರ್ಥಿ ಸೌಧ ಕಾರ್ಯಾಲಯದಲ್ಲಿ ನಿನ್ನೆ ಸಂಜೆ ದೀಪೋತ್ಸವ ಹಾಗೂ ಲಕ್ಷ್ಮೀ ಪೂಜೆ ಹಮ್ಮಿಕೊಳ್ಳಲಾಗಿತ್ತು. ವಿಎಸ್‍ಕೆ ವಿವಿಯ ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಮರ್ಚೆಡ್ ಮಲ್ಲಿಕಾರ್ಜುನ ಮಾತನಾಡಿ ಅಜ್ಞಾನ, ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚಣ ದ್ವೇಷ, ಅಸೂಯೆ ಬಿಟ್ಟು ಪ್ರೀತಿಯ ಜ್ಯೋತಿ ಬೆಳಗಿಸೋಣ. ಜಾತಿ-ಧರ್ಮ, ಕುಲ-ಮತ ಎನ್ನದೆ ಸಂತಸದಿಂದ ಬೆಳಕಿನ ಹಬ್ಬ ಆಚರಿಸೋಣ ಎಂದರು.
ವಿಭಾಗ ಪ್ರಮುಖ್ ದೊಡ್ಡಬಸವನಗೌಡ, ವಿಭಾಗ ಸಂಘಟನಾ ಕಾರ್ಯದರ್ಶಿ ಯುವರಾಜ, ನಗರ ಸಂಘಟನಾ ಕಾರ್ಯದರ್ಶಿ ಕೌಶಿಕ್, ನಗರ, ಕಾರ್ಯದರ್ಶಿ ಹರ್ಷ ನಾಯಕ್. ತಾಲೂಕು ಸಂಚಾಲಕ ನವೀನ್, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಸೃಷ್ಟಿ, ಕಾರ್ಯಕರ್ತರಾದ ಭಾರ್ಗವಿ, ಹೇಮಲತ, ಉಮೇಶ್, ಭರತ್, ಕೋಮಾಲಿಕ, ರೂಪಾಲಿಕ ಮತ್ತು ಇತರರು ಭಾಗವಹಿಸಿದ್ದರು.