ಎಬಿವಿಪಿ ದೇಶಭಕ್ತ ಸಂಘಟನೆ: ಶ್ರೀಘನಲಿಂಗ ರುದ್ರಮುನಿ ಶಿವಾಚಾರ್ಯರು

ಬೀದರ,ಜ.11- ನಗರದ ಸದಾನಂದ ಸ್ವಾಮಿ ಮಠದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಬಸವಕಲ್ಯಾಣ ನಗರದ ಅಭ್ಯಾಸ ವರ್ಗಗಕ್ಕೆ ಪೂಜ್ಯ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.
ಎಬಿವಿಪಿ ಸದಾ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಲ್ಲುವಂತಹ ದೇಶಭಕ್ತ ಸಂಘಟನೆಯಾಗಿದ್ದು, ರಾಷ್ಟ್ರದ ಗೌರವ ದೇಶದ ಯುವಕರ ಮೇಲೆ ನಿಂತಿದೆ ಎಂದ ಪೂಜ್ಯರು, ಆದರ್ಶಗಳನ್ನು ಮೈಗೊಡಿಸಿಕೊಳ್ಳವ ಯುವಕರನ್ನು ಇವತ್ತು ಎಬಿವಿಪಿ ತಯಾರು ಮಾಡುತ್ತಿದೆ. ತಾವು ಕೂಡಾ ವಿದ್ಯಾರ್ಥಿ ಯಾಗಿದ್ದಾಗ ಎಬಿವಿಪಿ ಕಾರ್ಯಕರ್ತನಾಗಿದ್ದೆ ಅನ್ನುವ ನನಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಎಬಿವಿಪಿ ಜಿಲ್ಲಾ ಪ್ರಮುಖ್ ಯೋಗೇಶ್ ಎಮ್ ಬಿ, ಎಬಿವಿಪಿ ರಾಷ್ಟ್ರದ ಪುನರ್ನಿರ್ಮಾಣದ ಸಂಕಲ್ಪ ಹೊತ್ತು ವಿದ್ಯಾರ್ಥಿಗಳ ಮಧ್ಯೆ ಕೆಲಸ ಮಾಡುವ ವಿದ್ಯಾರ್ಥಿ ಸಂಘಟನೆ. ವಿದ್ಯಾರ್ಥಿಗಳಿಗಾಗಿ ಅನೇಕ ಶಿಬಿರಗಳನ್ನು ಮಾಡಿ ಅವರ ವ್ಯಕ್ತಿತ್ವ ವಿಕಸನಕ್ಕಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಅಂತಾ ಬಂದಾಗ ತತ್ ಕ್ಷಣದಲ್ಲಿ ಬರುವ ಏಕೈಕ ಸಂಘಟನೆ ಎಂದರೆ ಅದು ಎಬಿವಿಪಿ ಎಂದರು.
ವೇದಿಕೆ ಮೇಲೆ ಮೇಲೆ ಮುಖ್ಯ ಅತಿಥಿ ಯಾಗಿ ಆಗಮಿಸಿದ ಡಿss ಬೀದರ ಜಿಲ್ಲಾ ಕಾರ್ಯವಾಹರಾದ ಭಾರ್ಗವಾಚಾರಿ ಅವರು ಮಾತನಾಡಿ, ರಾಷ್ಟ್ರವನ್ನು ಪರಮವೈಭವ ಸ್ಥಿತಿಗೆ ತರುವ ಕಾರ್ಯ ವಿದ್ಯಾರ್ಥಿ ಪರಿಷತ್ ಮಾಡ್ತಾಯಿದೆ ಶ್ರೀರಾಮಚಂದ್ರನನ್ನು ಆದರ್ಶವಾಗಿಟ್ಟುಕೊಂಡು ನಾವೆಲ್ಲ ಮುಂದುವರಿಯಬೇಕು. ಒಟ್ಟಾರೆಯಾಗಿ ರಾಷ್ಟ್ರಪುನರ್ನಿರ್ಮಾಣ ಮಾಡುವ ಹೊಣೆ ತಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ್ಯದರ್ಶಿಗಳಾದ ನಾಗರಾಜ ಬಟಗೇರಾ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೆ ವೇಳೆ ವಿದ್ಯಾರ್ಥಿಗಳಿಗೆ ಸೈದ್ದಾಂತಿ ಭೂಮಿಕೆ, ಶಾಖೆ&ಸಂಚಾಲನೆ ಅವಧಿಯನ್ನು ಯೋಗೇಶ್ ಎಮ್ ಬಿ, ರೇವಣಸಿದ್ದ ಜಾಡರ್ ತೆಗೆದುಕೊಂಡು ಸಂಘಟನೆ ಬಗ್ಗೆ ತಿಳಿಹೇಳಿದರು.
ಕೊನೆಯಲ್ಲಿ ಸಮಾರೋಪ ನುಡಿಯನ್ನ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ ಅವರು ನೆರವೇರಿಸಿದರು. ಸಂಘಟನೆಯ ಪ್ರಮುಖ ಜವಬ್ದಾರಿಗಳನ್ನು ರಾಜ್ಯಸಹ ಕಾರ್ಯದರ್ಶಿಗಳಾದ ನಾಗರಾಜ ಬಟಗೇರಾ ಅವರು ಘೋಷಣೆ ಮಾಡಿ, ಬಸವಕಲ್ಯಾಣ ತಾಲೂಕಾ ಪ್ರಮುಖರಾಗಿ ಡಾ.ಬಸವರಾಜ ಖಂಡಾಳೆ, ತಾಲೂಕಾ ಸಂಚಾಲಕರಾಗಿ ಸುನಿಲ್, ನಗರ ಅಧ್ಯಕ್ಷರಾಗಿ ದತ್ತಾತ್ರೇಯ ಪಾಟೀಲ, ನಗರ ಕಾರ್ಯದರ್ಶಿಯಾಗಿ ಕುಮಾರಿ ವೈಷ್ಣವಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಭಾಗ್ಯಶ್ರಿ ಅವರು ಉಪಸ್ಥಿತರಿದ್ದರು